ಅಂಬಾಟಿ ರಾಯುಡು ಕಮ್‌ಬ್ಯಾಕ್ ದಿನಾಂಕ ಬಹಿರಂಗಪಡಿಸಿದ ಎಂಎಸ್ ಧೋನಿ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಸ್ವಲ್ಪ ಸಮಸ್ಯೆಯಲ್ಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿ ಸಿಎಸ್‌ಕೆ ಸೋತಿದೆ. ಅದೂ ಸೋತ ರನ್‌ಗಳ ಅಂತರ ಎರಡೂ ಪಂದ್ಯಗಳಲ್ಲೂ ಹೆಚ್ಚಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 16 ರನ್‌ನಿಂದ ಪರಾಭವಗೊಂಡಿತ್ತು. ಇನ್ನು ಯುವಕರು ಹೆಚ್ಚಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಿಎಸ್‌ಕೆ 44 ರನ್ ಸೋಲನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಬ್ಯಾಟಿಂಗ್ ವಿಭಾಗದ ವೈಫಲ್ಯ.
ಈ ಸೀಸನ್‌ನಲ್ಲಿ ಮುಖ್ಯವಾಗಿ ಸಿಎಸ್‌ಕೆ ಬಲವಾಗಿರಬೇಕಾಗಿದ್ದ ಸುರೇಶ್ ರೈನಾ ಆಡಿಲ್ಲ. ಇನ್ನು ಉದ್ಘಾಟನಾ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಅಂಬಾಟಿ ರಾಯುಡು ಗಾಯಗೊಂಡು ತಂಡದಿಂದ ಹೊರಗಿದ್ದಾರೆ. ಇದೇ ಎರಡು ಪಂದ್ಯಗಳಲ್ಲಿ ಸಿಎಸ್‌ಕೆ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ರಾಯುಡು ಶೀಘ್ರ ತಂಡ ಸೇರಿಕೊಳ್ಳಲಿದ್ದಾರೆ ಎಂದು ಧೋನಿ ಹೇಳಿದ್ದಾರೆ.
ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಧೋನಿ, 'ಬ್ಯಾಟಿಂಗ್ ಸಂಯೋಜನೆಗೆ ಸಂಬಂಧಿಸಿ ನಾವು ಮುಂದಿನ ಪಂದ್ಯದಲ್ಲಿ ಒಂದು ಸ್ಪಷ್ಟ ಚಿತ್ರಣದೊಂದಿಗೆ ಬರಬೇಕಾಗಿದೆ. ಮುಂದಿನ ಪಂದ್ಯದಲ್ಲಿ ರಾಯುಡು ಬಂದ ಮೇಲೆ ತಂಡದ ಸಮತೋಲನ ಸರಿ ಹೋಗಲಿದೆ,' ಎಂದರು. ಅಕ್ಟೋಬರ್ 2ರಂದು ಸಿಎಸ್‌ಕೆ ತಂಡ ಸನ್ ರೈಸರ್ಸ್ ಹೈದರಾಬಾದ್ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications