For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಗಮನ ಸೆಳೆದ ಎಂಎಸ್ ಧೋನಿಯ 'ವಿಭಿನ್ನ' ಗಡ್ಡ-ವಿಡಿಯೋ

IPL 2020: MS Dhonis Thala beard goes viral on social media

ಅಬುಧಾಬಿ: ಭಾರತದ ಮಾಜಿ ನಾಯಕ ಎಂಎಸ್ ಧೋನಿ ಈ ಹಿಂದೆ ಹೇರ್ ಸ್ಟೈಲ್‌ಗಾಗಿ ಮೈದಾನದಲ್ಲಿ ಗಮನ ಸೆಳೆದಿದ್ದರು. ಈ ಬಾರಿ ಕೂಲ್ ಕ್ಯಾಪ್ಟನ್‌ ಧೋನಿ ವಿಭಿನ್ನ ಮೀಸೆಗಾಗಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ. 'ತಲಾ' ಗಡ್ಡ-ಮೀಸೆಯ ಮೂಲಕ ಧೋನಿ ಮಿಂಚಿದ್ದು ಈ ಸಾರಿ ಕಂಡುಬಂದಿದೆ.

ಶನಿವಾರ (ಸೆಪ್ಟೆಂಬರ್ 19) ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ವೇಳೆ ಸಿಎಸ್‌ಕೆ ನಾಯಕ ವಿಭಿನ್ನ ಗಡ್ಡ-ಮೀಸೆಯೊಂದಿಗೆ ಮೈದಾನದಲ್ಲಿ ಓಡಾಡುತ್ತಿದ್ದುದು ಕಾಣಸಿಕ್ಕಿತ್ತು.

ಧೋನಿ ಕಡೇಯ ಪಂದ್ಯ ಆಡಿದ್ದು ವಿಶ್ವಕಪ್ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಹೊರ ಬಿದ್ದಿದ್ದಾಗ. ಅದಾಗಿ ಸುಮಾರು 14 ತಿಂಗಳ ಬಳಿಕ ಧೋನಿ ಇದೇ ಬಾರಿ ಮೈದಾನಕ್ಕಿಳಿದಿದ್ದರು. ಅಂಗಣಕ್ಕಿಳಿದ ಧೋನಿ ವಿಭಿನ್ನ ಮೀಸೆ-ಗಡ್ಡ ಬಿಟ್ಟಿದ್ದು ಕಾಣಿಸಿತ್ತು. ಅಂದ್ಹಾಗೆ ಧೋನಿಯ ಈ ಗಡ್ಡದ ಸ್ಟೈಲ್‌ಗೆ 'ತಲಾ' ಸ್ಟೈಲ್ ಅಂತಾರೆ.

ದೂರದಿಂದ ನೋಡುವಾಗ ಒಂಥರಾ ಸಿಂಗಂ ಸ್ಟೈಲ್ ರೀತಿಯಲ್ಲಿ ಗಡ್ಡ ಬಿಟ್ಟಂತೆ ಕಾಣುತ್ತಿತ್ತು. ಒನ್ನೊಂದು ರೀತಿಯಲ್ಲಿ ಭಾರತದ ಸೈನಿಕ ಅಭಿನಂದನ್ ರೀತಿಯಲ್ಲೂ ಕಾಣುತ್ತಿತ್ತು. ಆಗಸ್ಟ್ 15ರಂದು ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿರುವ ಧೋನಿ ಈ ಐಪಿಎಲ್ ಪಂದ್ಯದ ಮೂಲಕ ಮತ್ತೆ ಕ್ರಿಕೆಟ್‌ಗೆ ಮರಳಿದ್ದಾರೆ. ಧೋನಿ ಮೀಸೆಗಂಗೂ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

Story first published: Saturday, September 19, 2020, 22:13 [IST]
Other articles published on Sep 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+