ಐಪಿಎಲ್ 2020 ಫೈನಲ್: ಮೇಲ್ನೋಟಕ್ಕೆ ಡೆಲ್ಲಿಗಿಂತ ಮುಂಬೈ ಬಲಿಷ್ಠ, ಆದರೆ..

ಐಪಿಎಲ್ ಫೈನಲ್ ಪಂದ್ಯದ ಕ್ಷಣಗಣನೆ ಆರಂಭವಾಗಿದೆ. ಎರಡು ತಮಡಗಳ ಬಲಾಬಲಗಳ ಲೆಕ್ಕಾಚಾರಗಳನ್ನು ಅಭಿಮಾನಿಗಳು ನಡೆಸುತ್ತಿದ್ದು ಯಾರು ಗೆಲ್ಲಬಹುದು ಎಂಬ ಊಹೆಯಲ್ಲಿ ತೊಡಗಿದ್ದಾರೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿಕೊಂಡು ಬಂದಿರುವ ಮುಂಬೈ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಹಾಗಾಗಿ ಟೂರ್ನಿ ಗೆಲ್ಲುವ ಫೇವರೀಟ್ ತಂಡ ಎನಿಸಿಕೊಂಡಿದೆ ಮುಂಬೈ
ಮುಂಬೈ ತಂಡ ಲೀಗ್ ಹಂತದಲ್ಲಿ ಹೆಚ್ಚಿನ ಗೆಲುವನ್ನು ಕಂಡು ಮೊದಲನೇ ತಂಡವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು. ಬಳಿಕ ಇದೇ ಡೆಲ್ಲಿಯನ್ನು ಸುಲಭವಾಗಿ ಮಣಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ಅದಕ್ಕೂ ಮುನ್ನ ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾದಾಗಲೂ ಮುಂಬೈ ಜಯಭೇರಿ ಬಾರಿಸಿತ್ತು.
ಹಾಗಾದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ತಂಡಗಳ ಪ್ರದರ್ಶನದ ಆದಾರದ ಬಲಾಬಲ ಹೇಗಿದೆ ಅಂಕಿಅಂಶಗಳು ಏನು ಹೇಳುತ್ತವೆ ಎಂಬುದನ್ನು ಮುಂದೆ ಓದಿ..

ಮುಂಬೈ ತಂಡದ ಬಲಿಷ್ಠ ಬೌಲಿಂಗ್ ವಿಭಾಗ
ಮುಂಬೈ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಬಲಾಢ್ಯವಾಗಿದೆ. ಎದುರಾಳ ರನ್ ಕಡಿವಾಣ ಹಾಕುವುದರಲ್ಲಿ ನಿಸ್ಸೀಮರಾಗಿರುವ ಈ ಬೌಲರ್‌ಗಳು ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಬ್ರೇಕ್ ನೀಡುತ್ತಾರೆ. ಒಂದು ತಂಡವಾಗಿ ಮುಂಬೈ ಬೌಲಿಂಗ್ ವಿಭಾಗ 7.75ರ ಎಕಾನಮಿಯಲ್ಲಿ ರನ್ ನೀಡಿದೆ. 20 ಸ್ಟ್ರೈಕ್‌ರೇಟ್ ಹೊಂದಿದ್ದು 25.83ರ ಸರಾಸರಿಯಿದೆ. ಉಳಿದ ಎಲ್ಲಾ ತಂಡಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ದಾಖಲೆಯಾಗಿದೆ.

ಡೆಲ್ಲಿ ತಂಡದ ಬೌಲಿಂಗ್ ವಿಭಾಗ
ಇತ್ತ ಡೆಲ್ಲಿ ತಂಡದ ಬೌಲಿಂಗ್ ವಿಭಾಗ ಅಂಕಿಅಂಶಗಳು ಇದಕ್ಕಿಂತ ಭಿನ್ನವಾಗಿದೆ. ಡೆಲ್ಲಿ 8.13 ಎಕಾನಮಿ ಹೊಂದಿದ್ದು 21.90 ಸ್ಟ್ರೈಕ್‌ರೇಟ್‌ನಲ್ಲಿ ವಿಕೆಟ್ ಪಡೆದಿದೆ. ಡೆಲ್ಲಿ ತಂಡದ ಬೌಲಿಂಗ್ ವಿಭಾಗದ ಸರಾಸರಿ 29.69 ಇದೆ.

ರಬಡಾ-ಬೂಮ್ರಾ ಪೈಪೋಟಿ
ಐಪಿಎಲ್ 2020ಯಲ್ಲಿ ಪರ್ಪಲ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದು ಕೂಡ ಸಾಕಷ್ಟು ಕುತೂಹಲವನ್ನು ಹುಟ್ಟಿಸಿರುವ ವಿಚಾರವಾಗಿದೆ. ಡೆಲ್ಲಿ ಹಾಗೂ ಮುಂಬೈ ತಂಡದ ಇಬ್ಬರು ಪ್ರಮುಖ ಬೌಲರ್‌ಗಳು ಇದಕ್ಕಾಗಿ ತೀವ್ರ ಪೈಪೋಟಿಯಲ್ಲಿದ್ದಾರೆ. ಇದು ಟೂರ್ನಿಯ ಪೈನಲ್ ಪಂದ್ಯದಲ್ಲೂ ಮುಂದಿವರಿಯಲಿದೆ. ಸದ್ಯ ರಬಡಾ 29 ವಿಕೆಟ್ ಪಡೆದು ಮುನ್ನಡೆಯಲ್ಲಿದ್ದರೆ 27 ವಿಕೆಟ್ ಪಡೆದ ಬೂಮ್ರಾ 2ನೇ ಸ್ಥಾನದಲ್ಲಿದ್ದಾರೆ. ಎರಡು ತಂಡಗಳ ಎರಡನೇ ವೇಗಿಗಳು ಕೂಡ ಪೈಪೋಟಿಗಿಳಿದಿದ್ದಾರೆ. ಡೆಲ್ಲಿಯ ಅನ್ರಿಕ್ ನಾರ್ಕಿಯಾ 20 ವಿಕೆಟ್ ಪಡೆದಿದ್ದರೆ ಮುಂಬೈನ ಟ್ರೆಂಡ್ ಬೋಲ್ಟ್ 22 ವಿಕೆಟ್ ಪಡೆದುಕೊಂಡಿದ್ದಾರೆ.

ರನ್‌ಗಳಿಕೆಯಲ್ಲಿ ಧವನ್ ಮುಂದೆ
ಬ್ಯಾಟಿಂಗ್ ವಿಭಾಗದ ಪ್ರದರ್ಶನ ಎರಡು ತಂಡಗಳ ಮಧ್ಯೆ ಪ್ರಮುಖ ವ್ಯತ್ಯಾಸವಾಗಿದೆ. ಎರಡು ತಂಡಗಳ ಬ್ಯಾಟ್ಸ್‌ಮನ್‌ಗಳ ಪೈಕಿ ಶಿಖರ್ ಧವನ್ 603 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಡೆಲ್ಲಿ ತಂಡದ ಪರವಾಗಿ ಎರಡನೇ ಸ್ಥಾನದಲ್ಲಿ ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್ 452 ಹಾಗೂ ಮಾರ್ಕಸ್ ಸ್ಟೋಯ್ನಿಸ್ 352 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಮುಂಬೈ ತಂಡದಲ್ಲಿ ಟಾಪ್ ಮೂರು ಆಟಗಾರರು ಸಮಾನ ಪ್ರದರ್ಶನ ನೀಡಿದ್ದಾರೆ. ಇಶಾನ್ ಕಿಶನ್ ಹಾಗೂ ಕ್ವಿಂಟನ್ ಡಿಕಾಕ್ 483 ರನ್ ಗಳಿಸಿದರೆ ಸೂರ್ಯಕುಮಾರ್ ಯಾದವ್ 461 ರನ್ ಗಳಿಸಿದ್ದಾರೆ.

ವೈಯಕ್ತಿಕ ಪ್ರದರ್ಶನದಲ್ಲಿ ಡೆಲ್ಲಿ ಮುಂದೆ
ಈ ಪ್ರದರ್ಶನದ ಆಧಾರದಲ್ಲಿ ತಂಡವಾಗಿ ಮುಂಬೈ ನೀಡಿದ ಸರ್ವಾಂಗೀಣ ಪ್ರದರ್ಶನ ತಂಡಕ್ಕೆ ಆಧಾರವಾಗಿದೆ. ಆದರೆ ವೈಯಕ್ತಿಕ ಆಟಗಾರರ ದಾಖಲೆಯಲ್ಲಿ ಡೆಲ್ಲಿ ಮುನ್ನಡೆಯನ್ನು ಸಾಧಿಸಿರುವುದು ಗಮನಿಸಬಹುದು. ಹೀಗಾಗಿ ಫೈನಲ್ ಪಂದ್ಯದಲ್ಲಿ ಮೇಲಾಗಬಹುದು ಎಂಬುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications