Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ನಮ್ಮದು ಯಾರೂ ಎದುರಿಸಲು ಬಯಸದ ತಂಡ ಎಂದ ಮುಂಬೈ ಕೋಚ್

IPL 2020: Mumbai Indians are a team that no one else wants to face, says Bond

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಲೀಗ್ ಹಂತದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿರುವುದು ಸುಳ್ಳಲ್ಲ. ತಂಡದ ಆಟಗಾರರು ಕೂಡ ಆತ್ಮವಿಶ್ವಾಸದಿಂದ ಕೂಡಿದ್ದಾರೆ. ಈಗ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಕೂಡ ಈ ಬಗ್ಗೆ ಇದೇ ಆತ್ಮ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೊದಲ ಕ್ವಾಲಿಫೈಯರ್‌ನಲ್ಲಿ ಕಣಕ್ಕಿಳಿಯಲಿದೆ. ಗುರುವಾರ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ತಂಡವೂ ನಮ್ಮ ತಂಡವನ್ನು ಎದುರಿಸಲು ಬಯಸುವುದಿಲ್ಲ ಎಂದಿದ್ದಾರೆ.

"ನಿಜ ನಾವು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಿಲ್ಲ. ಆದರೆ ಇದು ಟೂರ್ನಿಯಲ್ಲಿ ಯಾವುದೇ ರೀತಿಯಲ್ಲೂ ಪರಿಣಾಮವನ್ನು ಬೀರಲಾರದು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಏನು ಕಾದಿರಬಹುದು ಎಂದು ಎಲ್ಲರೂ ಕಾಯುತ್ತಿದ್ದಾರೆ. ನಾವು ಕೂಡ ಮುಂದುವರಿದು ಎದುರುನೋಡುತ್ತಿದ್ದೇವೆ" ಎಂದಿದ್ದಾರೆ ಶೇನ್ ಬಾಂಡ್.

ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಪ್ರಮುಖ ಬೌಲರ್‌ಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಟ್ರೆಂಟ್ ಬೋಲ್ಡ್ ವಿಶ್ರಾಂತಿಯನ್ನು ಪಡೆದಿದ್ದರು. ಈ ಬಗ್ಗೆ ಮಾತನಾಡಿದ ಬಾಂಡ್ ಬಹಳ ಮುಖ್ಯವಾಗಿರುವ ಪಂದ್ಯಕ್ಕೂ ಮುನ್ನ ಇಬ್ಬರು ವೇಗಿಗಳು ಉತ್ತಮ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ ಎಂದರು.

ನಮ್ಮ ಬೌಲಿಂಗ್ ವಿಭಾಗ ಉಳಿದ ಎಲ್ಲರಿಗಿಂತಲೂ ಬಲಿಷ್ಠವಾಗಿದೆ. ನಮ್ಮ ತಂಡ ನಿಜಕ್ಕೂ ಉಳಿದ ಎಲ್ಲಾ ತಂಡಗಳು ಎದುರಿಸಲು ಬಯಸದ ತಂಡವಾಗಿದೆ. ಯಾಕೆಂದರೆ ನಾವು ಅದ್ಭುತ ಪ್ರದರ್ಶನ ನೀಡುತ್ತೇವೆ ಎಂದು ಹಾಗೂ ನಾವು ಕೆಲ ಆಘಾತಗಳನ್ನು ನೀಡಲಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ. ಪೈಪೋಟಿಯ ಪಂದ್ಯಗಳನ್ನ ಕೂಡ ನಾವು ಗೆಲ್ಲುತ್ತೇವೆ. ಇದು ಸಾಕಷ್ಟು ವ್ಯತ್ಯಾಸಗಳನ್ನು ಮಾಡುತ್ತದೆ ಎಂದಿದ್ದಾರೆ ಶೇನ್ ಬಾಂಡ್.

Story first published: Wednesday, November 4, 2020, 20:59 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+