ಐಪಿಎಲ್ 2020 ಫೈನಲ್: ಮುಂಬೈ ಗೆಲುವಿಗೆ ಅರ್ಹವಾಗಿತ್ತು ಎಂದ ಡೆಲ್ಲಿ ಸ್ಪಿನ್ನರ್ ಅಶ್ವಿನ್

ಆರ್ ಅಶ್ವಿನ್ ಮುಂಬೈ ವಿರುದ್ಧದ ಡೆಲ್ಲಿ ಪರವಾಗಿ ಫೈನಲ್‌ನಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರನೇ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಹಿಂದೆ ಚೆನ್ನೈ ಸೂಪರ್ ಕಿಂಗ್ಸ ತಂಡದ ಪರವಾಗಿ ಐದು ಬಾರಿ ಪೈನಲ್‌ನಲ್ಲಿ ಆಡಿದ್ದರು. ಈ ಫೈನಲ್ ಪಂದ್ಯದ ಬಳಿಕ ಟ್ವಿಟ್ಟರ್‌ನಲ್ಲಿ ಮುಂಬೈಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಆರ್‌ಅಶ್ವಿನ್ "ಈ ರಾತ್ರಿ ನಮ್ಮ ಪರವಾಗಿರಲಿಲ್ಲ. ಅದ್ಬುತವಾಗಿ ಆಡಿದ್ದೀರಿ ಮುಂಬೈ ಇಂಡಿಯನ್ಸ್. ಗೆಲುವಿಗೆ ಅರ್ಹರಾದ ತಂಡವಾಗಿದೆ. ಟೂರ್ನಿಯುದ್ದಕ್ಕೂ ತುಂಬಾ ಕಠಿಣ ತಂಡವಾದ ತಂಡವಾಗಿತ್ತು. ಅಂತಿಮವಾಗಿ, ಬಿಸಿಸಿಐ ಹಾಗೂ ಐಪಿಎಲ್ ನ ಶ್ರೇಷ್ಠವಾದ ಪ್ರಯತ್ನ. ಇಂತಾ ಕಠಿಣ ಸಂದರ್ಭದಲ್ಲಿ ಟೂರ್ನಿಯನ್ನು ನಡೆಸಿ ಯಶಸ್ವಿಗೊಳಿಸಿದ್ದೀರಿ" ಎಂದು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಇದೇ ಮೊದಲ ಬಾರಿಗೆ ಐಪಿಎಲ್ ಪೈನಲ್ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಹೊರತುಪಡಿಸಿ ಬೆರೆ ತಣಡದ ಪರವಾಗಿ ಆಡುದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ನೀಡಿದ ಸವಾಲನ್ನು ಮುಂಬೈ ಇಂಡಿಯನ್ಸ್ ಹೆಚ್ಚಿನ ಆತಂಕವಿಲ್ಲದೆ 5 ವಿಕೆಟ್‌ಗಳ ಗೆಲುವು ಸಾಧಿಸಿತು.
ಈ ಫೈನಲ್ ಪಂದ್ಯದಲ್ಲಿ ಆರ್‌ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿ ರನ್ ನಿಯಂತ್ರಣವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗದಿರುವುದು ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಆಶಾದಾಯಕವಾಗಿ ಪರಿಣನಿಸಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications