ಐಪಿಎಲ್ 2020: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪೂರ್ಣ ವೇಳಾಪಟ್ಟಿ

ಮುಂಬೈ, ಫೆಬ್ರವರಿ 22: ಮಾರ್ಚ್ 29ರಿಂದ ಭಾರತದ ಆಕರ್ಷಣೀಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯಾನ್ಸ್ ನೆಚ್ಚಿನ ತಾಣ, ಮುಂಬೈಯಿಂದಲೇ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
13ನೇ ಆವೃತ್ತಿಯ ಐಪಿಎಲ್‌ನಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುವ ಯೋಚನೆಯಲ್ಲಿದೆ. ಕಳೆದ ಸೀಸನ್‌ನಲ್ಲಿ ಎಂಐ, ಸಿಎಸ್‌ಕೆ ವಿರುದ್ಧ ರೋಚಕ ಒಂದು ರನ್ ಜಯ ಸಾಧಿಸಿತ್ತು.
ಐಪಿಎಲ್‌ನಲ್ಲಿ ಅತ್ಯಧಿಕ ನಾಲ್ಕು ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿರುವ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಮಾಹಿತಿಗಳು, 2020ರ ಸೀಸನ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಮೊದಲ ಮತ್ತು ಕೊನೇ ಪಂದ್ಯ
4 ಐಪಿಎಲ್ ಟ್ರೋಫಿಗಳನ್ನು ಜಯಿಸಿರುವ ಮುಂಬೈ ಇಂಡಿಯನ್ಸ್, ಮಾರ್ಚ್ 29ರಂದು ಮುಂಬೈಯಲ್ಲಿ ನಡೆಯುವ 13ನೇ ಐಪಿಎಲ್ ಅವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಟ ಆರಂಭಿಸಿದರೆ, ಮೇ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆತಿಥೇಯ ಬೆಂಗಳೂರು ವಿರುದ್ಧದ ಪಂದ್ಯದೊಂದಿಗೆ ಲೀಗ್ ಹಂತದ ಕಡೇಯ ಪಂದ್ಯವನ್ನಾಡಲಿದೆ.

ಪಂದ್ಯಗಳು ಆರಂಭ
ನಾಥನ್ ಕೌಲ್ಟರ್-ನೈಲ್ ಮತ್ತು ಕ್ರಿಸ್ ಲಿನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿದ್ದರಿಂದ ಎಂಐ ಈ ಬಾರಿ ಇನ್ನೂ ಬಲಗೊಂಡಿದೆ. ತಂಡದ ಒಂದು ಪಂದ್ಯ ಮಾತ್ರ 4 pmಗೆ ಆರಂಭವಾಗಲಿದೆ. ಏಪ್ರಿಲ್ 5ರಂದು ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯವಿದು. ಉಳಿದೆಲ್ಲ ಪಂದ್ಯಗಳು 8 pmಗೆ ಆರಂಭಗೊಳ್ಳಲಿವೆ.

ಎಂಐ ಸಂಪೂರ್ಣ ತಂಡ
ರೋಹಿತ್ ಶರ್ಮಾ, ಶೆರ್ಫೇನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ಅಲ್‌ಮೋನ್‌ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್, ಆದಿತ್ಯ ತಾರೆ, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಅನುಕೂಲ್ ರಾಯ್, ನಾಥನ್ ಕೌಲ್ಟರ್-ನೈಲ್, ಧವಳ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ, ಮಿಚೆಲ್ ಮೆಕ್‌ಕ್ಲೆನಾಘನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಮೊಹ್ಸಿನ್ ಖಾನ್, ಫ್ಯಾಬಿಯನ್ ಅಲೆನ್, ಪ್ರಿನ್ಸ್ ಬಲ್ವಂತ್ ರೈ ಸಿಂಗ್, ದಿಗ್ವಿಜಯ್ ದೇಶ್‌ಮುಖ್.

ಪೂರ್ಣ ವೇಳಾಪಟ್ಟಿ
ಮಾರ್ಚ್ 29, ಭಾನುವಾರ Vs ಚೆನ್ನೈ ಸೂಪರ್ ಕಿಂಗ್ಸ್, 8 PM, ಮುಂಬೈ
ಏಪ್ರಿಲ್ 1, ಬುಧವಾರ, Vs ಸನ್‌ರೈಸರ್ಸ್ ಹೈದರಾಬಾದ್, 8 PM, ಹೈದರಾಬಾದ್
ಏಪ್ರಿಲ್ 5, ಭಾನುವಾರ, Vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 4 PM, ಮುಂಬೈ
ಏಪ್ರಿಲ್ 8, ಬುಧವಾರ, Vs ಕಿಂಗ್ಸ್ ಇಲೆವೆನ್ ಪಂಜಾಬ್, 8 PM, ಮೊಹಾಲಿ
ಏಪ್ರಿಲ್ 12, ಭಾನುವಾರ, Vs ಕೋಲ್ಕತಾ ನೈಟ್ ರೈಡರ್ಸ್, 8 PM, ಕೋಲ್ಕತ್ತಾ
ಏಪ್ರಿಲ್ 15, ಬುಧವಾರ, Vs ರಾಜಸ್ಥಾನ್ ರಾಯಲ್ಸ್, 8 PM, ಮುಂಬೈ
ಏಪ್ರಿಲ್ 20, ಸೋಮವಾರ, Vs ಕಿಂಗ್ಸ್ ಇಲೆವೆನ್ ಪಂಜಾಬ್, 8 PM ಮುಂಬೈ
ಏಪ್ರಿಲ್ 24, ಶುಕ್ರವಾರ, Vs ಚೆನ್ನೈ ಸೂಪರ್ ಕಿಂಗ್ಸ್, 8 PM, ಚೆನ್ನೈ
ಏಪ್ರಿಲ್ 28, ಮಂಗಳವಾರ, Vs ಕೋಲ್ಕತಾ ನೈಟ್ ರೈಡರ್ಸ್, 8 PM, ಮುಂಬೈ
ಮೇ 1, ಶುಕ್ರವಾರ, Vs ದೆಹಲಿ ರಾಜಧಾನಿಗಳು, 8 PM, ಮುಂಬೈ
ಮೇ 6, ಬುಧವಾರ, Vs ದೆಹಲಿ ರಾಜಧಾನಿಗಳು, 8 PM, ದೆಹಲಿ
ಮೇ 9, ಶನಿವಾರ, Vs ಸನ್‌ರೈಸರ್ಸ್ ಹೈದರಾಬಾದ್, 8 PM, ಮುಂಬೈ
ಮೇ 11, ಸೋಮವಾರ, Vs ರಾಜಸ್ಥಾನ್ ರಾಯಲ್ಸ್, 8 PM, ಜೈಪುರ
ಮೇ 17, ಭಾನುವಾರ, Vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 8 PM, ಬೆಂಗಳೂರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications