Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಶೀದ್ ಖಾನ್ ಮಾರಾಟ ಮಾಡುವಂತೆ ಮುಂಬೈ ಕೇಳಿತ್ತು: ಟಾಮ್ ಮೂಡಿ

IPL 2020: ‘Mumbai Indians once asked SRH for a trade of Rashid Khan’, reveals Tom Moody

ದುಬೈ: ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್‌ಗೆ ದೊಡ್ಡ ಆಸ್ತಿಯಾಗಿದ್ದಾರೆ. 2020ರ ಐಪಿಎಲ್ ಆವೃತ್ತಿಯಲ್ಲೂ ರಶೀದ್ ಖಾನ್ ಎಚ್‌ಆರ್‌ಎಚ್‌ಗೆ ಬಲವಾಗಿ ನಿಂತಿದ್ದರು. ಉತ್ತಮ ಪ್ರದರ್ಶನ ನೀಡಿದ್ದರು.

ಒಟ್ಟು 16 ಪಂದ್ಯಗಳನ್ನಾಡಿದ್ದ ರಶೀದ್ ಖಾನ್, 17.20ರ ಸರಾಸರಿಯಂತೆ 20 ವಿಕೆಟ್ ಮುರಿದಿದ್ದರು. ಈ ಸ್ಥಿರ ಫಾರ್ಮ್‌ ಕಾರಣಕ್ಕಾಗಿಯೇ ರಶೀದ್ ಟೂರ್ನಿಯುದ್ದಕ್ಕೂ ಫೇವರಿಟ್ ಆಟಗಾರ ಅನ್ನಿಸಿಕೊಂಡಿದ್ದರು. ಇದೇ ರಶೀದ್ ಅವರನ್ನು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಮಗೆ ಮಾರಾಟ ನಡೆಸುವಂತೆ ಕೇಳಿಕೊಂಡಿತ್ತಂತೆ.

ರಶೀದ್ ಖಾನ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಆಸಕ್ತಿ ತೋರಿದ್ದನ್ನು ಸನ್ ರೈಸರ್ಸ್ ಹೈದರಾಬಾದ್ ಮಾಜಿ ಕೋಚ್ ಟಾಮ್ ಮೂಡಿ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮುಂಬೈ ರಶೀದ್ ಅವರನ್ನು ವ್ಯಾಪಾರ ಮಾಡುವಂತೆ ಕೇಳಿಕೊಂಡಿತ್ತು ಎಂದು ಮೂಡಿ ಹೇಳಿದ್ದಾರೆ.

'ಬಹುಶಃ ಇದು ಸುಮಾರು 2 ವರ್ಷಗಳ ಹಿಂದಿರಬೇಕು. ನಾನು ನೆನಪಿಸಿಕೊಳ್ಳಬಲ್ಲೆ. ಆವತ್ತು ಮುಂಬೈ, ರಶೀದ್ ಖಾನ್ ಅವರನ್ನು ವ್ಯಾಪಾರ ಮಾಡಲು ಕೇಳಿತ್ತು. ರಶೀದ್ ಖಾನ್‌ಗಾಗಿ ನಮ್ಮ ಬಾಗಿಲು ತಟ್ಟುವ ಅರ್ಹತೆ ಅಥವಾ ಧೈರ್ಯವಿದ್ದ ಫ್ರಾಂಚೈಸಿ ಅದೊಂದೇ ಆಗಿತ್ತು,' ಎಂದು ಮೂಡಿ ವಿವರಿಸಿದ್ದಾರೆ.

Story first published: Wednesday, November 11, 2020, 20:26 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+