ಐಪಿಎಲ್: ನಿಲ್ಲದೆ ಅಭ್ಯಾಸ ನಡೆಸುತ್ತಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಭಾರತ ತಂಡಗಳು ಪ್ರಕಟವಾದಾಗ ತಂಡಗಳಲ್ಲಿ ಶರ್ಮಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ತಂಡದಲ್ಲಿ ಆಯ್ಕೆ ಸಿಗದಿರುವುದು ರೋಹಿತ್‌ಗೆ ತಲೆಬಿಸಿ ತಂದಿದೆ. ಶರ್ಮಾ ಈಗ ಅವಿರತ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಫಿಟ್‌ಗೆ ಮರಳಿ ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳುವ ಯೋಚನೆಯಷ್ಟೇ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನುಳಿದ ಪಂದ್ಯಗಳಲ್ಲಿ ಆಡುವ ಯೋಚನೆಯೂ ಇಟ್ಟುಕೊಂಡಿದ್ದಾರೆ.
ಬುಧವಾರ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿದಿರಲಿಲ್ಲ. ಆದರೆ ತನ್ನ ಗಾಯ ಗುಣ ಮಾಡಿಕೊಳ್ಳುವತ್ತ ಮತ್ತು ಫಿಟ್‌ನೆಸ್‌ಗೆ ಮರಳುವತ್ತ ರೋಹಿತ್ ಪ್ರಯತ್ನವಿತ್ತು ಎಂದು ಮೂಲವೊಂದು ತಿಳಿಸಿದೆ.
'ರೋಹಿತ್ ಶರ್ಮಾ ದಿನನಿತ್ಯ ಅಭ್ಯಾಸ ಮಾಡುತ್ತಿದ್ದಾರೆ. ಕಿಂಗ್ಸ್ 11 ಪಂಜಾಬ್ ಪಂದ್ಯದ ನಂತರ ವಿಶ್ರಾಂತಿಯಾಗಿತ್ತು. ಆದರೆ ಯಾವಾಗೆಲ್ಲ ಮುಂಬೈ ಇಂಡಿಯನ್ಸ್ ಅಭ್ಯಾಸ ಇರುತ್ತೋ ಆಗ ರೋಹಿತ್ ಕೂಡ ಅಲ್ಲಿರುತ್ತಿದ್ದಾರೆ. ನಿಧಾನಕ್ಕೆ ಅಭ್ಯಾಸ ಮಾಡುತ್ತಿದ್ದಾರೆ. ನೆಟ್‌ಗೆ ಹೊಡೆಯುತ್ತಿದ್ದಾರೆ,' ಎಂದು ಮೂಲವೊಂದು ಎಎನ್‌ಐಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications