ಆರ್‌ಸಿಬಿ ಫ್ಯಾನ್ಸ್‌ಗೆ ಭರ್ಜರಿ ಆಫರ್, 200 ರೂ. ಬಿರಿಯಾನಿ ಬರೀ 49 ರೂ.ಗೆ!

ಬೆಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಅಂಕಪಟ್ಟಿಯಲ್ಲಿ ಏರುಪೇರು ಆಗುತ್ತಲೇ ಇರುವುದರಿಂದ ಕ್ರಿಕೆಟ್ ಪ್ರಿಯರಿಗಂತೂ ಒಳ್ಳೆಯ ಮನರಂಜನೆ ಸಿಗುತ್ತಿದೆ. ಸೆಪ್ಟೆಂಬರ್ 19ರಂದು ಐಪಿಎಲ್ ಹಬ್ಬ ಆರಂಭವಾಗಿದ್ದು ಈಗಾಗಲೇ 27 ಪಂದ್ಯಗಳು ಮುಗಿದಿವೆ. ಈವರೆಗಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
ಕ್ರಿಕೆಟ್ ಪ್ರಿಯರಿಗೆ ಅದರಲ್ಲೂ ಕನ್ನಡಿಗರಿಗೆ ಖುಷಿಯ ಸಂಗತಿಯೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 97 ರನ್‌ಗಳಿಂದ ಸೋತು ನೆಟ್ ರನ್‌ರೇಟ್‌ನಲ್ಲಿ ಹೊಡೆತ ತಿಂದಿದೆ ಅನ್ನೋದೊಂದು ಬಿಟ್ಟರೆ ಉಳಿದಂತೆ ನಮ್ಮ ಕೊಹ್ಲಿ ಪಡೆ ವಿಜಯದ ಹಾದಿಯಲ್ಲಿದೆ.
ಕನ್ನಗಡಿಗರಿಗೆ, ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಭರ್ಜರಿ ಆಫರ್ ಒಂದಿದೆ. ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ತಂಡದ ಅಭಿಮಾನಕ್ಕೋಸ್ಕರ ಉತ್ತಮ ಆಫರ್ ಪ್ರಕಟಿಸಿದ್ದಾರೆ.

ಏನೀ ಭರ್ಜರಿ ಆಫರ್?
ನೀವು ಕರ್ನಾಟಕದವರಾಗಿದ್ದರೆ ಅದರಲ್ಲೂ ಮೈಸೂರು ಭಾಗದವರಾಗಿದ್ದರೆ ಈ ಭರ್ಜರಿ ಆಫರ್‌ನ ಅನುಕೂಲ ಪಡೆಯಬಹುದು. ಮೈಸೂರಿನಲ್ಲಿ 'ನಾಟಿ ಹಟ್' ಎನ್ನುವ ಹೋಟೆಲ್ ಇದೆ. ಇಲ್ಲಿ ಆರ್‌ಸಿಬಿ ಪಂದ್ಯಗಳ ವೇಳೆ ನಾನ್ ವೆಜ್ ಖಾದ್ಯಗಳು ಭಾರೀ ಡಿಸ್ಕೌಂಟ್ ಬೆಲೆಗೆ ಸಿಗಲಿದೆ. ಹೋಟೆಲ್ ಮಾಲೀಕ ಸ್ವರೂಪ್ ಆರ್‌ಸಿಬಿ ಮೇಲೆ ಈ ರೀತಿಯ ಅಭಿಮಾನ, ಪ್ರೀತಿ ತೋರಿಕೊಂಡಿದ್ದಾರೆ.

200 ರೂ. ಬಿರಿಯಾನಿ 49 ರೂ.ಗೆ
ರುಚಿಯಾದ ಬಿರಿಯಾನಿ ಬಿರಿಯಾನಿಗೆ ಬೆಲೆಯೂ ಜಾಸ್ತಿ. ನಾಟಿ ಹಟ್‌ನಲ್ಲೂ ಸ್ವಾದಿಷ್ಟಕರವಾದ ಚಿಕನ್ ಬಿರಿಯಾನಿ ಸಿಗುತ್ತದೆ. ಆದರೆ ಸಾಮಾನ್ಯ ದಿನಗಳಲ್ಲಿ ಈ ಬಿರಿಯಾನಿ ಬೆಲೆ 200 ರೂ. ಇದ್ದರೆ ಆರ್‌ಸಿಬಿಗೆ ಪಂದ್ಯಗಳಿರುವ ದಿನ ಬಿರಿಯಾನಿ ಬೆಲೆ ಕೇವಲ 49 ರೂ. ಇರಲಿದೆ. ಇನ್ನು ಚಿಕನ್ ಚಾಪ್ಸ್ ಕೂಡ 49 ರೂ.ಗೆ ಅಭಿಮಾನಿಗಳು ಸವಿಯಬಹುದಾಗಿದೆ.

ಎಷ್ಟು ದಿನದ ಆಫರ್ ಇದು?
ನಾಟಿ ಹಟ್‌ನಲ್ಲಿ ಈ ಭರ್ಜರಿ ಆಫರ್ ಎಷ್ಟು ದಿನಗಳವರೆಗೆ ಇರಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಎಲ್ಲೀವರೆಗೆ ಪಂದ್ಯ ಆಡುತ್ತದೆಯೋ ಅಲ್ಲೀವರೆಗೂ ಆಫರ್ ಸಿಗಲಿದೆ. ಆರ್‌ಸಿಬಿ ಫೈನಲ್‌ಗೆ ಹೋದರೆ ನವೆಂಬರ್ 10ರ ವರೆಗೂ ನೀವಿಲ್ಲಿ ಕಡಿಮೆ ಬೆಲೆಗೆ ಬಿರಿಯಾನಿ ಸವಿಯಬಹುದು. ಇನ್ನು ಡಿಸ್ಕೌಂಟ್ ಬೆಲೆಯೆ ಬಿರಿಯಾನಿ ನಿಮಗೆ ಆರ್‌ಸಿಬಿ ಪಂದ್ಯವಿರುವ ದಿನ ಸಂಜೆ 6ರಿಂದ ರಾತ್ರಿ 10ರವರಗೆ ಸಿಗಲಿದೆ.

ಹೋಟೆಲ್ ಪೂರ್ತಿ ಆರ್‌ಸಿಬಿ ರಂಗು
ನಾಟಿ ಹಟ್ ಹೋಟೆಲ್‌ನಲ್ಲಿ ಸ್ವರೂಪ್ ಅವರು ಬರೀ ಡಿಸ್ಕೌಂಟ್ ಆಫರ್ ನೀಡಿದ್ದಷ್ಟೇ ಅಲ್ಲ, ಇಡಿ ಹೋಟೆಲನ್ನೇ ಆರ್‌ಸಿಬಿಮಯವಾಗಿ ಬದಲಿಸಿದ್ದಾರೆ. ಈ ಹೋಟೆಲ್‌ನಲ್ಲಿ ಆರ್‌ಸಿಬಿ ಬಾವುಟಗಳು ಹಾರಾಡುತ್ತಿವೆ. ಆರ್‌ಸಿಬಿ ಆಟಗಾರರ ಚಿತ್ರಗಳಿವೆ. ಅಷ್ಟೇ ಅಲ್ಲ ಹೋಟೆಲ್ ಒಳಗೆ ಐಪಿಎಲ್ ಮಾದರಿಯ ಕಪ್ ಕೂಡ ಕಣ್ ಸೆಳೆಯುತ್ತಿದೆ. ಯಾಕೀ ಕಪ್ಪು ಇಲ್ಲಿದೆ ಅಂತ ಅವರಲ್ಲಿ ಕೇಳಿದ್ರೆ, 'ಈ ಸಲ ಕಪ್ ನಮ್ದೇ. ಆರ್‌ಸಿಬಿ ಕಪ್ ಗೆಲ್ಲುತ್ತೆ ಅನ್ನೋ ಭರವಸೆ' ಅಂತ ಆತ್ಮವಿಶ್ವಾಸದಿಂದ ನುಡೀತಾರೆ ಸ್ವರೂಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications