Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020, ರಾಷ್ಟ್ರೀಯ ಕ್ಯಾಂಪ್ ಯುಎಇಯಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ?

IPL 2020, National Camp Likely to be Held In the UAE: Report

ನವದೆಹಲಿ, ಜುಲೈ 15: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಒಪ್ಪಂದದಲ್ಲಿರುವ ಆಟಗಾರರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ರಾಷ್ಟ್ರೀಯ ಕ್ಯಾಂಪ್ ಆಯೋಜಿಸಲು ಮತ್ತು 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಅಲ್ಲೇ ನಡೆಸಲು ಬಿಸಿಸಿಐ ಯೋಚಿಸಿದೆ ಎಂದು ಮೂಲವೊಂದು ಹೇಳಿದೆ.

ಮಾರ್ಚ್ 29ರಂದು ಮುಂಬೈನಲ್ಲಿನ ಉದ್ಘಾಟನಾ ಪಂದ್ಯದ ಮೂಲಕ ಐಪಿಎಲ್ 2020 ಸೀಸನ್ ಆರಂಭವಾಗಬೇಕಿತ್ತು. ಆದರೆ ಕೊರೊನಾದಿಂದ ಮುಂದೂಡಲ್ಪಟ್ಟಿರುವ ಐಪಿಎಲ್ ಅನ್ನು ಮುಂಬೈನಲ್ಲಿ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಕೊರೊನಾ ಪ್ರಕರಣಗಳ ಸಂಖ್ಯೆ ಮುಂಬೈನಲ್ಲೇ ಅತೀ ಹೆಚ್ಚಿದೆ. ಹೀಗಾಗಿ ಯುಎಇಯಲ್ಲಿ ಈ ಬಾರಿಯ ಐಪಿಎಲ್ ನಡೆಯಲಿದೆ ಎನ್ನಲಾಗುತ್ತಿದೆ.

'ಈಗಿನ ಪರಿಸ್ಥಿತಿ ನೋಡಿದರೆ, ಮುಂಬೈನಲ್ಲಿ ಕೊರೊನಾವೈರಸ್ ಪರಿಸ್ಥಿತಿ ಸುಧಾರಿಸದಿದ್ದರೆ ಬಹುಶಃ ಐಪಿಎಲ್ ಆತಿಥ್ಯ ಯುಎಇ ವಹಿಸಿಕೊಳ್ಳಲಿದೆ. ಹೀಗಾಗಿ ರಾಷ್ಟ್ರೀಯ ಕ್ಯಾಂಪ್‌ ಕೂಡ ಅಲ್ಲೇ ನಡೆಯೋ ಸಾಧ್ಯತೆ ಹೆಚ್ಚಿದೆ. ಐಪಿಎಲ್ ತಾಣ ಘೋಷಿಸಲ್ಪಟ್ಟ ಬಳಿಕ ಐಪಿಎಲ್ ಬಗ್ಗೆ ಮುಂದುವರೆಯಲು ಸಾಧ್ಯವಾಗುತ್ತದೆ,' ಎಂದು ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

ಏನೇ ಇರಲಿ, ಈ ಬಗ್ಗೆ ಜುಲೈ 17ರಂದು ನಡೆಯುವ ಬಿಸಿಸಿಐ ಅಪೆಕ್ಸ್ ಮೀಟಿಂಗ್ ಬಳಿಕವೇ ಸ್ಪಷ್ಟ ಚಿತ್ರಣ ಲಭಿಸಲಿದೆ. ಸದ್ಯಕ್ಕೆ ಐಪಿಎಲ್ ಅನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸಲು ಯೋಜನೆ ಸಿದ್ಧವಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಬಗ್ಗೆಯೂ ಅಂತಿಮ ನಿರ್ಧಾರ ಪ್ರಕಟಗೊಳ್ಳಬೇಕಿದೆ.

Story first published: Wednesday, July 15, 2020, 16:04 [IST]
Other articles published on Jul 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+