'ಐಪಿಎಲ್ ಆಟಗಾರರು ಯುಎಇಯಲ್ಲಿ ಪ್ರತಿದಿನ ಕೊರೊನಾ ಪರೀಕ್ಷೆಗೆ ಒಳಗಾಗಲಿ'

ನವದೆಹಲಿ, ಜುಲೈ 25: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವಾಗ ಪ್ರತಿ ದಿನವೂ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.
'ಸಾಧ್ಯವಾದಷ್ಟು ಹೆಚ್ಚಿಗೆ ಅಂದರೆ ದಿನಂಪ್ರತಿ ಕೊರೊನಾವೈರಸ್ ಪರೀಕ್ಷೆ ನಡೆಸುವುದನ್ನು ನಾನು ಬಯಸುತ್ತೇನೆ ಮತ್ತು ಆದ್ಯತೆ ನೀಡುತ್ತೇನೆ. ಒಂದು ವೇಳೆ ನಾನು ಕ್ರಿಕೆಟರ್ ಆಗಿದ್ದರೆ ಪ್ರತಿ ದಿನವೂ ಪರೀಕ್ಷೆಗೆ ಒಳಗಾಗಲು ಬಯಸುತ್ತಿದ್ದೆ,' ಎಂದು ಪ್ರೆಸ್ ಟ್ರಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ನೆಸ್ ವಾಡಿಯಾ ಅಭಿಪ್ರಾಯಿಸಿದ್ದಾರೆ.

ಐಪಿಎಲ್ ಸುರಕ್ಷಿತ ಮತ್ತು ಯಶಸ್ವಿ ಅನ್ನಿಸಬೇಕಾದರೆ ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ಎರಡರಲ್ಲೂ ಕಟ್ಟು ನಿಟ್ಟಾಗಿ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಆಟಗಾರರು ಅಥವಾ ಸಿಬ್ಬಂದಿ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು,' ಎಂದು ವಾಡಿಯಾ ಎಚ್ಚರಿಸಿದ್ದಾರೆ.
ಈ ಬಾರಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಯಲಿದೆ. ಯುಎಇಗೆ ಈಗ ಪ್ರಯಾಣಿಸಬೇಕಾದರೆ ಪ್ರತೀ ಪ್ರಯಾಣಿಕನೂ ಇಲ್ಲಿಂದ ಹೊರಡುವುದಕ್ಕೂ ಮುನ್ನ ಕೊರೊನಾ ನೆಗೆಟಿವ್ ಇರಬೇಕು ಮತ್ತು ಅಲ್ಲಿ ತಲುಪಿದ ಬಳಿಕ ಮತ್ತೆ ಪರೀಕ್ಷೆ ನಡೆಸಬೇಕು. ಎರಡರಲ್ಲೂ ನೆಗೆಟಿವ್ ಬಂದರಷ್ಟೇ ಕ್ವಾರಂಟೈನ್ ರಹಿತ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications