ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

ಐಪಿಎಲ್‌ನ 13ನೇ ಆವೃತ್ತಿಗೆ ಕೇಂದ್ರ ಸರ್ಕಾರದ ಹಸಿರುನಿಶಾನೆಯೊಂದಿಗೆ ಭರದಿಂದ ಚಾಲನೆ ದೊರೆತಿದೆ. ಇದೇ ಸಂದರ್ಭದಲ್ಲಿ ಭಾನುವಾರ ಐಪಿಎಲ್ ಆಡಳಿತಾತ್ಮಕ ಮಂಡಳಿಯ ಸಭೆಯನ್ನೂ ನಡೆಸಲಾಗಿತ್ತು. ಈ ಸಭೆಯ ಬಳಿಕ ಪ್ರಮುಖ ವಿಚಾರಗಳನ್ನು ಅಂತಿಮಗೊಳಿಸಲಾಗಿದ್ದು ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ.
ಐಪಿಎಲ್ ಪಂದ್ಯಗಳನ್ನು ಆರಂಭಿಸುವ ಸಮಯದ ಬಗ್ಗೆ ಇದ್ದ ಅನುಮಾನಗಳಿಗೂ ಈಗ ಸ್ಪಷ್ಟ ಉತ್ತರ ಸಿಕ್ಕಿದ್ದು ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಎರಡು ಪಂದ್ಯಗಳಿರುವ ದಿನಗಳಲ್ಲಿ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ರಾತ್ರಿಯ ಪಂದ್ಯ 7:30ಕ್ಕೆ ಆರಂಭವಾಗಲಿದೆ.

ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಾವಳಿ
ಈ ಬಾರಿಯ ಟೂರ್ನಿಯನ್ನು ಮೂರು ಕ್ರೀಡಾಂಗಣಗಳಲ್ಲಿ ನಡೆಸಲು ತೀರ್ಮಾನವನ್ನು ಕೈಗೊಂಡಿತ್ತು ಅದಕ್ಕೂ ಕೂಡ ಈಗ ಅಧಿಕೃತ ಮುದ್ರೆ ಬಿದ್ದಿದೆ. ಯುಎಇನ ಪ್ರಮುಖ ಮೂರು ಕ್ರೀಡಾಂಗಣಗಳಾದ ದುಬೈ, ಅಬುದಾಬಿ ಹಾಗೂ ಶಾರ್ಜಾ ದ ಕ್ರಿಡಾಂಗಣಗಳಲ್ಲಿ ಪಂದ್ಯವನ್ನು ಏರ್ಪಡಿಸಲಾಗುತ್ತದೆ.

ಕೋವಿಡ್ ಸಬ್‌ಟಿಟ್ಯೂಡ್
ಇನ್ನು ಪ್ರತೀ ತಂಡಕ್ಕೂ ಗರಿಷ್ಠ 24 ಆಟಗಾರರ ತಂಡವನ್ನು ಹೊಂದಲು ಅವಕಾಶವನ್ನು ನೀಡಲಾಗಿದೆ. ಇದರ ಜೊತೆಗೆ ಕೋವಿಡ್19 ಬದಲಾವಣೆಯಾಗಿ ಅನಿರ್ದಿಷ್ಟ ಆಟಗಾರರನ್ನು ಸಬ್‌ಟಿಟ್ಯೂಟ್ ಮಾಡಿಕೊಳ್ಳುವ ಅವಕಾಶವನ್ನು ಈ ಬಾರಿಯ ಟೂರ್ನಿಯಲ್ಲಿ ನೀಡಲಾಗಿದೆ.

'ಎಲ್ಲಾ ಪ್ರಾಯೋಜಕರು ನಮ್ಮೊಂದಿಗೆ'
ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್ ಪ್ರಾಯೋಜಕರ ಬಗ್ಗೆಯೂ ತನ್ನ ನಿರ್ಧಾರವನ್ನು ಐಪಿಎಲ್ ಪ್ರಕಟಿಸಿತು. ನಮ್ಮ ಎಲ್ಲಾ ಪ್ರಾಯೋಜಕರು ಈ ಬಾರಿಯ ಐಪಿಎಲ್‌ನಲ್ಲೂ ನಮ್ಮೊಂದಿಗೆ ಇರಲಿದ್ದಾರೆ. ಈ ವಾಕ್ಯದೊಳಗಿನ ಅರ್ಥವವನ್ನು ನೀವು ಗ್ರಹಿಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ಆಡಳಿತಾತ್ಮಕ ಮಂಡಳಿಯ ಸದಸ್ಯರೊಬ್ಬರು ಮಾಹಿತಿಯನ್ನು ನೀಡಿದ್ದಾರೆ.

ಚೀನಾ ಕಂಪನಿಯೇ ಟೈಟಲ್ ಸ್ಪಾನ್ಸರ್
ಈ ಮೂಲಕ ಚೀನಾದ ವಿವೋ ಈ ಬಾರಿಯ ಟೈಟಲ್ ಸ್ಪಾನ್ಸರ್ ಆಗಿ ಮುಂದುವರಿಯುವುದು ಖಚಿತವಾಗಿದೆ. ಭಾರತ ಚೀನಾ ನಡುವಿನ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಚೀನಾ ಕಂಪನಿಯ ಪ್ರಾಯೋಜಕತ್ವದಿಂದ ಬಿಸಿಸಿಐ ಹಿಂದಕ್ಕೆ ಸರಿಯಲಿದೆ ಎನ್ನಲಾಗಿತ್ತು. ಆದರೆ ವಿವೋ ಈ ಬಾರಿಯ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications