ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧ ಶತಕ ಚಚ್ಚಿದ ಪ್ಯಾಟ್ ಕಮಿನ್ಸ್

ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಪ್ಯಾಟ್ ಕಮಿನ್ಸ್ ಟಿ20 ಕ್ರಿಕೆಟ್ ನಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧ ಶತಕ ಬಾರಿಸಿದ್ದಾರೆ. ಶುಕ್ರವಾರ (ಅಕ್ಟೋಬರ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಮಿನ್ಸ್ ಅರ್ಧ ಶತಕ ಸಿಡಿಸಿದ್ದಾರೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪ್ಯಾಟ್ ಕಮಿನ್ಸ್, ನಾಯಕ ಇಯಾನ್ ಮಾರ್ಗನ್ ಜೊತೆ ಉತ್ತಮ ಜೊತೆಯಾಟ ನೀಡಿದರು. 36 ಎಸೆತಗಳಿಗೆ ಅಜೇಯ 53 ರನ್ ಬಾರಿಸಿದರು. ಇದರಲ್ಲಿ 2 ಸಿಕ್ಸರ್ ಮತ್ತು 5 ಫೋರ್‌ಗಳು ಸೇರಿದ್ದವು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೋಲ್ಕತ್ತಾದಿಂದ ರಾಹುಲ್ ತ್ರಿಪಾಠಿ 7, ಶುಬ್‌ಮನ್ ಗಿಲ್ 21, ಇಯಾನ್ ಮಾರ್ಗನ್ 39, ಆ್ಯಂದ್ರೆ ರಸೆಲ್ 12, ಕಮಿನ್ಸ್ 53 ರನ್ ಸೇರಿಸಿದರು. ಕೆಕೆಆರ್ 20 ಓವರ್ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತು.
ಆಸ್ಟ್ರೇಲಿಯಾದ ಬಲಗೈ ವೇಗಿ ಆಗಿರುವ ಪ್ಯಾಟ್ ಕಮಿನ್ಸ್ 30 ಟೆಸ್ಟ್ ಪಂದ್ಯಗಳಲ್ಲಿ 143 ವಿಕೆಟ್, 67 ಏಕದಿನ ಪಂದ್ಯಗಳಲ್ಲಿ 108, 30 ಟಿ20ಐ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. 24 ಐಪಿಎಲ್ ಪಂದ್ಯಗಳಲ್ಲಿ 19 ವಿಕೆಟ್ ಉರುಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 2 ಅರ್ಧ ಶತಕ ಬಾರಿಸಿರುವ ಕಮಿನ್ಸ್ ವೈಟ್ ಬಾಲ್‌ನಲ್ಲಿ ಹಾಫ್ ಸೆಂಚುರಿ ಬಾರಿಸುತ್ತಿರುವುದು ಇದೇ ಮೊದಲು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications