ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿ

ನವದೆಹಲಿ, ಆಗಸ್ಟ್ 10: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಟೈಟಲ್ ಸ್ಪಾನ್ಸರ್‌ಶಿಪ್‌ನ ಬಿಡ್ಡಿಂಗ್ ಅನ್ನು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಪರಿಗಣಿಸಿದೆ ಎಂದು ಕಂಪನಿಯ ಮೂಲ ತಿಳಿಸಿದೆ. ಐಪಿಎಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಇತ್ತೀಚೆಗೆ ಆಸಕ್ತರನ್ನು ಆಹ್ವಾನಿಸಿತ್ತು.
ಐಪಿಎಲ್ ಟೈಟಲ್ ಪ್ರಾಯೋಜಕತ್ವ ನೀಡುತ್ತಿದ್ದ ಚೀನಾ ಮೂಲದ ಮೊಬೈಲ್ ಉತ್ಪಾದನಾ ಕಂಪನಿ 'ವಿವೋ' ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿತ್ತು. ಲಡಾಕ್ ಗಡಿ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರಿಂದ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಮಾತುಗಳು ಭಾರತದಲ್ಲಿ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ವಿವೋ ಪ್ರಾಯೋಜಕತ್ವದ ಒಪ್ಪಂದ ಮುರಿದುಕೊಂಡಿತ್ತು.
ಈ ಬೆಳವಣಿಗೆ ಪತಂಜಲಿ ಕಂಪನಿಯು ಐಪಿಎಲ್ ಪ್ರಾಯೋಜಕತ್ವದತ್ತ ಆಸಕ್ತಿ ತೋರುವಂತೆ ಮಾಡಿದೆ. ಹೀಗಾಗಿ ಹರಿದ್ವಾರ ಮೂಲ ಸಂಸ್ಥೆ ಪತಂಜಲಿ, ತನ್ನಲ್ಲಿನ ಆಯುರ್ವೇದ ಮೂಲ ಎಫ್‌ಎಮ್‌ಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಉತ್ಪನ್ನಗಳಿಗೆ ಐಪಿಎಲ್ ಪ್ರಾಯೋಜಕತ್ವದ ಮೂಲಕ ಜಾಗತಿಕ ಮಾರುಕಟ್ಟೆ ಸೃಷ್ಟಿಸಲು ಯೋಜಿಸಿದೆ.
ಐಪಿಎಲ್ ಪ್ರಾಯೋಜಕತ್ವ ಬಿಡ್ಡಿಂಗ್‌ನತ್ತ ಪತಂಜಲಿ ಆಸಕ್ತಿ ತಾಳಿರುವುದನ್ನು ಪತಂಜಲಿ ವಕ್ತಾರ ಎಸ್‌ಕೆ ತಿಜರವಾಲ ಪಿಟಿಐಗೆ ಖಾತರಿಪಡಿಸಿದ್ದಾರೆ. 'ನಾವಿದನ್ನು ಪರಿಗಣಿಸಿದ್ದೇವೆ. ಭಾರತದ ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸಲು ಇದು ಸರಿಯಾದ ವೇದಿಕೆ. ಆ ದೃಷ್ಟಿಕೋನದಿಂದಾಗಿ ನಾವಿದನ್ನು ಪರಿಗಣಿಸುತ್ತಿದ್ದೇವೆ. ಆದರೆ ಬಿಡ್ಡಿಂಗ್ ತೆಗೆದುಕೊಳ್ಳಬೇಕೋ ಬೇಡವೋ ಅನ್ನೋ ಅಂತಿಮ ನಿರ್ಧಾರ ಇನ್ನಷ್ಟೇ ಪ್ರಕಟಿಸಲಿದ್ದೇವೆ,' ಎಂದು ತಿಜರವಾಲ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications