ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ಲೇ ಆಫ್ ಕುತೂಹಲ: ಕೆಕೆಆರ್, ಹೈದರಾಬಾದ್ ಎಂಟ್ರಿ ಹೇಗೆ ಸಾಧ್ಯ?

IPL 2020 play-off: Kolkata Knight Riders, Sunrisers Hyderabad chances of entering knockouts

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರಲ್ಲಿ ಪ್ಲೇ ಆಫ್ ಹಂತಕ್ಕೇರುವ ಮೂರು ತಂಡಗಳ ಬಗ್ಗೆ ಭಾರಿ ಕುತೂಹಲ ಮೂಡಿದೆ. ನಾಲ್ಕು ಬಾರಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ಹಂತ ತಲುಪಿದೆ. ರಾಜಸ್ಥಾನ, ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಮೆಂಟ್ ನಿಂದ ಹೊರ ಬಿದ್ದಿವೆ. ಮಿಕ್ಕ ತಂಡಗಳ ಕಥೆ ಏನು? ಇಲ್ಲಿದೆ ಉತ್ತರ...ನವೆಂಬರ್ 3ರ ಆರ್ ಸಿಬಿ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯದ ಫಲಿತಾಂಶದ ಮೇಲೆ ಕೆಕೆಆರ್ ಹಾಗೂ ರಾಜಸ್ಥಾನ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.

1. ಆರ್ ಸಿಬಿ ವಿರುದ್ಧ ಡಿಸಿ ಪಂದ್ಯ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಲೀಗ್ ಹಂತದಲ್ಲಿ 14 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ 14 ಅಂಕಗಳನ್ನು ಪಡೆದಿದ್ದು, ಕೆಕೆಆರ್ ಗಿಂತ ಮೇಲಿವೆ. ಆರ್ ಸಿಬಿ (-0.145 ರನ್ ಸರಾಸರಿ) ಹಾಗೂ ಡೆಲ್ಲಿ (-0.159) ಗಿಂತ ಕೆಕೆಆರ್ ಕಡಿಮೆ ರನ್ ಸರಾಸರಿ (-0.214) ಹೊಂದಿದೆ.

ಐಪಿಎಲ್: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?ಐಪಿಎಲ್: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?

ಕೊನೆ ಲೀಗ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 82 ರನ್ ಅಥವಾ ಹೆಚ್ಚಿನ ಅಂತರದಿಂದ ಸೋಲಿಸಿದ್ದರೆ ಕೆಕೆಆರ್ ರನ್ ಸರಾಸರಿಯು ಆರ್ ಸಿಬಿ ಹಾಗೂ ಡಿಸಿಗಿಂತ ಮೇಲಕ್ಕೇರುತ್ತಿತ್ತು.

ಈಗ ಡೆಲ್ಲಿ ತಂಡದ ಎದುರು ಆರ್ ಸಿಬಿ 22 ಅಥವಾ ಹೆಚ್ಚಿನ ರನ್ ಅಂತರದಿಂದ ಸೋಲು ಕಾಣಬೇಕು. ಅಥವಾ ಡೆಲ್ಲಿ ತಂಡವು ಆರ್ ಸಿಬಿಯನ್ನು 18 ಅಥವಾ ಹೆಚ್ಚು ರನ್ ಗಳಿಂದ ಸೋಲಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 16 ಅಂಕಗಳೊಂದಿಗೆ ಪ್ಲೇ ಆಫ್ ಹಂತಕ್ಕೆ ಸುಲಭವಾಗಿ ಎಂಟ್ರಿ ಪಡೆಯಲಿದೆ. ಒಂದು ವೇಳೆ ಗೆಲುವಿನ ಅಂತರದಲ್ಲಿ ಹೆಚ್ಚು ಕಡಿಮೆಯಾದರೆ ಕೆಕೆಆರ್ ಅವಕಾಶ ವಂಚಿತವಾಗುತ್ತದೆ.

IPL 2020 play-off: Kolkata Knight Riders, Sunrisers Hyderabad chances of entering knockouts

2. ಹೈದರಾಬಾದ್ ವಿರುದ್ಧ ಮುಂಬೈ
ಮೇಲ್ಕಂಡಂತೆ ರನ್ ಅಂತರದಲ್ಲಿ ಡೆಲ್ಲಿ ಅಥವಾ ಆರ್ ಸಿಬಿ ಗೆದ್ದರೂ ಕೆಕೆಆರ್ ಸುಲಭವಾಗಿ ಪ್ಲೇ ಆಫ್ ಸೇರಲು ಸಾಧ್ಯವಿಲ್ಲ. ಮುಂಬೈ ಹಾಗೂ ಹೈದರಾಬಾದ್ ವಿರುದ್ಧದ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

ಕೆಕೆಆರ್ ಗೆ ಅನುಕೂಲವಾಗಬೇಕಾದರೆ, ಮುಂಬೈ ತಂಡವು ಹೈದರಾಬಾದ್ ತಂಡವನ್ನು ಸೋಲಿಸಬೇಕಾಗುತ್ತದೆ. ಪ್ಲೇ ಆಫ್ ಹಂತಕ್ಕೆ ಸ್ಪರ್ಧಿಯಾಗಿರುವ ಮಿಕ್ಕ ಎಲ್ಲಾ ತಂಡಗಳಿಗಿಂತ ಹೈದರಾಬಾದ್ ರನ್ ಸರಾಸರಿ( +0.555) ಉತ್ತಮವಾಗಿದೆ. 13 ಪಂದ್ಯಗಳಿಂದ 12 ಅಂಕ ಪಡೆದಿರುವ ವಾರ್ನರ್ ಪಡೆ ಪ್ಲೇ ಆಫ್ ಹಂತಕ್ಕೇರಲು ಮುಂಬೈ ತಂಡವನ್ನು ಸೋಲಿಸಲೇಬೇಕು.

ಐಪಿಎಲ್ 2020: ಬೆಂಗಳೂರು vs ಡೆಲ್ಲಿ: ನಿರ್ಣಾಯಕ ಪಂದ್ಯದ ಸಂಪೂರ್ಣ ಮಾಹಿತಿಐಪಿಎಲ್ 2020: ಬೆಂಗಳೂರು vs ಡೆಲ್ಲಿ: ನಿರ್ಣಾಯಕ ಪಂದ್ಯದ ಸಂಪೂರ್ಣ ಮಾಹಿತಿ

3. ಹೈದರಾಬಾದ್ ಗೆದ್ದರೆ ಮುಂದೇನು?
ಒಂದು ವೇಳೆ ಕೊನೆ ಲೀಗ್ ಪಂದ್ಯದಲ್ಲಿ ಮುಂಬೈ ತಂಡವನ್ನು ಹೈದರಾಬಾದ್ ಸೋಲಿಸಿದರೆ 14 ಅಂಕ ಪಡೆದುಕೊಳ್ಳಲಿದೆ. ಮುಂಬೈ 18 ಅಂಕದೊಡನೆ ಪ್ಲೇ ಆಫ್ ಹಂತಕ್ಕೇರಿದೆ. ಆರ್ ಸಿಬಿ ಹಾಗೂ ಡಿಸಿ ಪೈಕಿ ಒಂದು ತಂಡ 16 ಅಂಕದೊಡನೆ ಎರಡನೇ ತಂಡವಾಗಿ ಪ್ಲೇ ಆಫ್ ಸೇರಲಿದೆ. ಸೋತ ತಂಡ ಕೂಡಾ 14 ಅಂಕಗಳ ಆಧಾರದ ಮೇಲೆ ಪ್ಲೇ ಆಫ್ ಸೇರಲಿದೆ. ಉತ್ತಮ ರನ್ ಸರಾಸರಿ ಆಧಾರದ ಮೇಲೆ ಹೈದರಾಬಾದ್ ಕೂಡಾ 4ನೇ ತಂಡವಾಗಿ ಪ್ರವೇಶಿಸಲಿದೆ. ಕೆಕೆಆರ್ ಉತ್ತಮ ರನ್ ಸರಾಸರಿ ಹೊಂದಿರದ ಕಾರಣ ಪ್ಲೇ ಆಫ್ ಅರ್ಹತೆ ಗಳಿಸುವಲ್ಲಿ ವಿಫಲವಾಗಲಿದೆ.

Story first published: Monday, November 2, 2020, 14:18 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X