Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊದಲನೇ ಐಪಿಎಲ್‌ನಲ್ಲಿ ಬೂಮ್ರಾ, ಪಾಂಡ್ಯಗಿಂತ ಪಡಿಕ್ಕಲ್ ಹೆಚ್ಚಿನ ಪ್ರಭಾವ ಬೀರಿದ್ದಾರೆ

IPL 2020: Playing his first IPL, Padikkal’s impact has been bigger than Bumrah and Pandya

ದೇವದತ್ ಪಡಿಕ್ಕಲ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿತ ಯುವ ಆಟಗಾರ ದೇವದತ್ ಪಡಿಕ್ಕಲ್. ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ತಮಡದಲ್ಲಿ ಮೊದಲ ಬಾರಿಗೆ ಐಪಿಎಲ್ ಆಡಲು ಇಳಿದು ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಪ್ರದರ್ಶನದ ಬಗ್ಗೆ ಕರ್ನಾಟಕದ ಹಿರಿಯ ಕೋಚ್ ಜಿಕೆ ಅನಿಲ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಿಕೆ ಅನಿಲ್ ಕುಮಾರ್ ದೇವದತ್ ಪಡಿಕ್ಕಲ್ ಸೇರಿದಂತೆ ಕರ್ನಾಟಕದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಕರುಣ್ ನಾಯರ್ ಸೇರಿದಂತೆ ಹಲವಾರು ಕ್ರಿಕೆಟಿಗರ ಬೆಳವಣಿಗೆಯಲ್ಲಿ ಪಾತ್ರರಾಗಿದ್ದಾರೆ. ಕರ್ನಾಟಕದ ಅಂಡರ್ 19 ತಂಡದ ಕೊಚ್ ಆಗಿ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಯಶಸ್ಸು ಸಾಧಿಸಿದ ಆಟಗಾರರ ಪೈಕಿ ಮೊದಲಿಗೆ ನೆನಪಾಗುವ ಹೆಸರು ಜಸ್ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ. ಆದರೆ ಈ ಆಟಗಾರರಿಗಿಂತಲೂ ಪಡಿಕ್ಕಲ್ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದಾರೆ ಎಂದು ಅನಿಲ್ ಕುಮಾರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

"ಪಾಂಡ್ಯ ಹಾಗೂ ಬೂಮ್ರಾ ಕೆಲ ಸಮಯಗಳನ್ನು ತೆಗೆದುಕೊಂಡರು. ತಮ್ಮ ಬೆಳವಣಿಗೆಗೆ ಈ ಆಟಗಾರರು 1-2 ವರ್ಷಗಳನ್ನು ತೆಗದುಕೊಂಡಿದ್ದಾರೆ. ಆದರೆ ಪಡಿಕ್ಕಲ್ ವಿಚಾರದಲ್ಲಿ ಹಾಗಿಲ್ಲ. ಅಂತಾರಾಷ್ಟ್ರಿಯ ಕ್ರಿಕೆಟಿಗರು ಕೂಡ ಐಪಿಎಲ್‌ಗೆ ಹೊಂದೊಕೊಳ್ಳಲು ಕೆಲ ಸಮಯಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪಡಿಕ್ಕಲ್ ಶ್ರೇಷ್ಠ ಪ್ರದರ್ಶನವನ್ನು ಆರಂಬದಿಂದಲೇ ನೀಡಿಕೊಂಡು ಬಂದಿದ್ದಾರೆ" ಎಂದು ಅನಿಲ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸದ್ಯ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಹೊಂದಿರುವ ಸ್ಥಾನವನ್ನು ಗಳಿಸಿಕೊಳ್ಳಲು ಅತ್ಯುತ್ತಮ ಸ್ಪರ್ಧಿಯಾಗಿದ್ದಾರೆ ಪಡಿಕ್ಕಲ್. ಈ ಐಪಿಎಲ್ ಮೂಲಕ ಅವರು ಯಾವುದೇ ಅನುಮಾನವಿಲ್ಲದೆ ಇನ್ನಷ್ಟು ಉನ್ನತ ಮಟ್ಟಕ್ಕೇರುತ್ತಾರೆ ಎಂದು ಅನಿಲ್ ಕುಮಾರ್ ಆಶಯ ವ್ಯಕ್ತಪಡಿಸಿದರು.

Story first published: Monday, November 9, 2020, 21:11 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+