
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ ) 2020ರ ಲೀಗ್ ಹಂತದ ಕೊನೆ ಪಂದ್ಯ ನವೆಂಬರ್ 3ರಂದು ಶಾರ್ಜಾದಲ್ಲಿ ನಡೆಯಿತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸಂಘಟಿತ ಹೋರಾಟ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಅರ್ಹ ಜಯ ದಾಖಲಿಸಿತು. ಈ ಗೆಲುವಿನ ಮೂಲಕ ವಾರ್ನರ್ ಪಡೆ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದ ನಾಲ್ಕನೇ ತಂಡವಾಗಿ ಹೊರ ಹೊಮ್ಮಿತು.
ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಪ್ಲೇ ಆಫ್ ನಲ್ಲಿ ಕ್ವಾಲಿಫೈಯರ್ 1 ಪಂದ್ಯವಾಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ.
ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದ ತಂಡದ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಆಡಲಿದೆ. ಈ ಕ್ವಾಲಿಫೈಯರ್ 2 ರಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್ 1ರಲ್ಲಿ ಗೆದ್ದು ನೇರ ಫೈನಲ್ ಸೇರಿದ ತಂಡಗಳು ಅಂತಿಮ ಹಣಾಹಣಿಯಲ್ಲಿ ಸೆಣಸಲಿವೆ.
ಲೀಗ್ ಹಂತದ ನಂತರ ನವೆಂಬರ್ 03,2020ರಂತೆ ಮುಂಬೈ, ಡೆಲ್ಲಿ, ಬೆಂಗಳೂರು ಹಾಗೂ ಹೈದರಾಬಾದ್ ಮೊದಲ ನಾಲ್ಕು ಸ್ಥಾನ ಪಡೆದುಕೊಂಡಿವೆ.
ಮುಂಬೈ ವಿರುದ್ಧ ಗೆಲುವು ಸಾಧಿಸಿದ್ದರಿಂದ 14 ಅಂಕ ಗಳಿಸಿದ ಹೈದರಾಬಾದ್ ಉತ್ತಮ ರನ್ ಸರಾಸರಿ ಮೂಲಕ ಪ್ಲೇ ಆಫ್ ಅರ್ಹತೆ ಗಳಿಸಿದ್ದಲ್ಲದೆ, ಕೆಕೆಆರ್ ತಂಡವನ್ನು 5ನೇ ಸ್ಥಾನಕ್ಕೆ ದೂಡಿದೆ.
ಕ್ವಾಲಿಫೈಯರ್ 1
ಗುರುವಾರ, ನವೆಂಬರ್ 5, 2020
ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್
ಸಮಯ: ಸಂಜೆ 7.30, ದುಬೈ
ಎಲಿಮಿನೇಟರ್ 1
ಶುಕ್ರವಾರ, ನವೆಂಬರ್ 6, 2020
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್
ಸಮಯ: ಸಂಜೆ 7.30, ಅಬುದಾಭಿ
ಕ್ವಾಲಿಫೈಯರ್ 2
ಭಾನುವಾರ, ನವೆಂಬರ್ 8, 2020
Q1 loser ವಿರುದ್ಧ E1 winner
ಸಮಯ: ಸಂಜೆ 7.30, ಅಬುದಾಭಿ
ಫೈನಲ್
ಮಂಗಳವಾರ, ನವೆಂಬರ್ 10, 2020
Q1 winner ವಿರುದ್ಧ Q2 winner
ಸಮಯ: ಸಂಜೆ 7.30, ದುಬೈ
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 14 ಪಂದ್ಯಗಳಿಂದ (670ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 14 ಪಂದ್ಯಗಳಿಂದ (25 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 14 ಪಂದ್ಯಗಳಿಂದ 26 ಸಿಕ್ಸರ್ ಸಿಡಿಸಿ ರಾಜಸ್ಥಾನದ ಸಂಜು ಸ್ಯಾಮ್ಸನ್ ಟಾಪ್ ನಲ್ಲಿದ್ದಾರೆ.
ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ