ಐಪಿಎಲ್: ಡೆಲ್ಲಿ, ಮುಂಬೈ, ಬೆಂಗಳೂರು ಪ್ಲೇ ಆಫ್ ಚಾನ್ಸ್ ಎಷ್ಟಿದೆ?

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ಲೇ ಆಫ್ ನಿಂದ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಗುಳಿಯುವ ಭೀತಿಯಲ್ಲಿದೆ. ಅಕ್ಟೋಬರ್ 18ರ ಸಂಜೆ ವೇಳೆಗೆ ಮೂರು ತಂಡಗಳು ಮಾತ್ರ ಪ್ಲೇ ಆಫ್ ಬಗ್ಗೆ ಆರಾಮಾಗಿ ಕುಳಿತು ಯೋಚಿಸಬಲ್ಲ ಪರಿಸ್ಥಿತಿಯಲ್ಲಿವೆ.
ಐಪಿಎಲ್ 2020ರಲ್ಲಿ ಮೊದಲಾರ್ಧ ಪಂದ್ಯಾವಳಿ ಮುಗಿದ ನಂತರ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಸ್ ಹಂತಕ್ಕೇರುವ ಅವಕಾಶ ಹೆಚ್ಚಿಸಿಕೊಂಡವು.
ಅಕ್ಟೋಬರ್ 18ರ ಸಂಜೆ ಯಂತೆ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ತಂಡ (ಅಂಕಪಟ್ಟಿ ನೋಡಿ)
ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳಲ್ಲಿ 7 ಗೆದ್ದು, 2 ಸೋತು (+0.921 ರನ್ ಸರಾಸರಿ) 14 ಅಂಕ ಗಳಿಸಿದೆ. ಮುಂಬೈ ಇಂಡಿಯನ್ಸ್ 8 ಗೆದ್ದು, 2 ಸೋತು (+1.353 ರನ್ ಸರಾಸರಿ) 12 ಅಂಕ ಗಳಿಸಿದೆ. ಬೆಂಗಳೂರು 9 ಗೆದ್ದು, 3 ಸೋತು (-0.096 ರನ್ ಸರಾಸರಿ) 12 ಅಂಕ ಗಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 8 ಗೆದ್ದು, 4 ಸೋತು (-0.684 ರನ್ ಸರಾಸರಿ) 8 ಅಂಕ ಗಳಿಸಿದೆ. ಒಂದು ವೇಳೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆದ್ದರೂ 10 ಅಂಕ ಗಳಿಸಿ 4ನೇ ಸ್ಥಾನದಲ್ಲಿ ಉಳಿಯಲಿದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಯಾವ ತಂಡಗಳಿಗೆ ಚಾನ್ಸ್ ಹೆಚ್ಚಿದೆ?
ಡೆಲ್ಲಿ ಇನ್ನು ಒಂದು ಪಂದ್ಯ ಗೆದ್ದರೆ ಸಾಕು. 16 ಅಂಕಗಳೊಂದಿಗೆ ಪ್ಲೇ ಆಫ್ಸ್ ಸೇರಲಿದೆ. ಮುಂಬೈ ಇನ್ನು ಎರಡು ಪಂದ್ಯ ಗೆಲ್ಲಬೇಕು 16 ಅಂಕ ಜೊತೆಗೆ ಉಳಿದ ತಂಡಕ್ಕಿಂತ ಉತ್ತಮ ರನ್ ಸರಾಸರಿ ಹೊಂದಿದೆ. ಬೆಂಗಳೂರು ತಂಡ ಕೂಡಾ 2 ಪಂದ್ಯ ಗೆದ್ದರೆ ಸಾಕು. ಆದರೆ, ರನ್ ಸರಾಸರಿ ಉತ್ತಮಪಡಿಸಿಕೊಳ್ಳಬೇಕಿದೆ.
ಮುಂಬೈ ಇಂಡಿಯನ್ಸ್ ಭಾನುವಾರದಂದು ರಾತ್ರಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಗೆದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications