ಐಪಿಎಲ್ 2020: ಮುಂಬೈ ಬಿರುಗಾಳಿಗೆ ತರಗೆಲೆಯಂತಾದ ಡೆಲ್ಲಿ, ಫೈನಲ್‌ಗೆ ಲಗ್ಗೆಯಿಟ್ಟ ರೋಹಿತ್ ಪಡೆ

ಐಪಿಎಲ್ 2020 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ 13ನೇ ಆವೃತ್ತಿಯ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಸರ್ವಾಂಗೀಣ ಪ್ರದರ್ಶನ ನೀಡಿ ಅಧಿಕಾರಯುತವಾಗಿ ವಿಜಯ ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲಿಗೆ ಎದುರಾಳಿ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ಡೆಲ್ಲಿ ಯಶಸ್ಸನ್ನು ಸಾಧಿಸಿದರೂ ಕೂಡ ಇದರ ಪೂರ್ಣ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಮುಂಬೈ ತಂಡದ ಬಲಿಷ್ಠ ಲೈನ್‌ಅಪ್ ಮುಂದು ಡೆಲ್ಲಿ ಬೌಲರ್‌ಗಳು ಮಂಕಾದರು.

200 ರನ್ ಕಲೆ ಹಾಕಿದ ಮುಂಬೈ
ಕ್ವಿಂಟನ್ ಡಿಕಾಕ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಪೋಟಕ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ಭರ್ತಿ 200 ರನ್‌ಗಳನ್ನು ಕಲೆ ಹಾಕಿತು. ಡೆಲ್ಲಿ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಆರ್ ಅಶ್ವಿನ್ 3 ವಿಕೆಟ್ ಕಿತ್ತು ಮಿಂಚಿದರು.

ಡೆಲ್ಲಿ ಸ್ಥಿತಿ ಶೋಚನೀಯ
ಇನ್ನು ಮುಂಬೈ ನೀಡಿದ 201 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತದ ಮೇಲೆ ಆಘಾತವನ್ನು ಅನುಭವಿಸಿತು. ಮುಂಬೈ ತಂಡದ ಮಾರಕ ಬೌಲಿಂಗ್ ದಾಳಿಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತರಗೆಲೆಯಂತೆ ಉರುಳಿದರು. ಸೊನ್ನೆ ರನ್‌ಗೆ 3 ವಿಕೆಟ್ ಕಳೆದುಕೊಂಡು ಡೆಲ್ಲಿ ಶೋಚನೀಯ ಸ್ಥಿತಿಯಲ್ಲಿತ್ತು. 20 ರನ್‌ಗಳಿಸುವ ವೇಳೆಗೆ 4ನೇ ವಿಕೆಟ್ ಕೂಡ ಕಳೆದುಕೊಂಡಿತ್ತು.

143 ರನ್‌ಗಳಿಗೆ ಆಟ ನಿಲ್ಲಿಸಿದ ಡೆಲ್ಲಿ
ಈ ಆಘಾತದಿಂದ ಹೊರ ಬರುವ ಯಾವುದೇ ಲಕ್ಷಣವೂ ಡೆಲ್ಲಿ ಕಡೆಯಿಂದ ಬರಲೇಯಿಲ್ಲ. ಮಾರ್ಕಸ್ ಸ್ಟೋಯ್ನಿಸ್ ಹಾಗೂ ಅಕ್ಷರ್ ಪಟೇಲ್ ಮುಂಬೈ ಬೌಲಿಂಗ್ ಪಡೆದೆ ಸಣ್ಣ ಪ್ರತಿರೋಧವನ್ನು ಒಡ್ಡಲು ಯಶಸ್ವಿಯಾದರು. ಇವರ ಈ ಸಾಹಸದಿಂದಾಗಿ 143 ರನ್‌ಗಳನ್ನು ಗಳಿಸಲು ಡೆಲ್ಲಿಗೆ ಸಾಧ್ಯವಾಯಿತು.

ಬೂಮ್ರಾ ಮ್ಯಾಜಿಕ್
ಮುಂಬೈ ಇಂಡಿಯನ್ಸ್ ಪರವಾಗಿ ಜಸ್ಪ್ರೀತ್ ಬೂಮ್ರಾ 4 ಓವರ್‌ಗಳಲ್ಲಿ 1 ಮೇಡನ್ ಸಹಿತ ಕೇವಲ 14 ರನ್ ನೀಡಿ 4 ವಿಕೆಟ್ ಪಡೆದರು. ಉಳಿದಂತೆ ಬೋಲ್ಟ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ 2 ವಿಕೆಟ್ ಕಿತ್ತು ಬ್ರೇಕ್ ನೀಡಿದರು. ಕೃಣಾಲ್ ಪಾಂಡ್ಯ ಹಾಗೂ ಕಿರಾನ್ ಪೊಲಾರ್ಡ್ ತಲಾ 1 ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications