ಐಪಿಎಲ್ 2020: ಮೊದಲನೇ ಕ್ವಾಲಿಫೈಯರ್‌ನಲ್ಲಿ ಬೃಹತ್ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಆರಂಭಿಕ ಆಘಾತದ ಹೊರತಾಗಿಯೂ ಅತ್ಯುತ್ತಮ ಮೊತ್ತವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 201 ರನ್‌ಗಳ ಗುರಿಯನ್ನು ನೀಡಿದೆ.
ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಆಘಾತವನ್ನು ಅನುಭವಿಸಿದರು. ಆದರೆ ಬಳಿಕ ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟವನ್ನು ನೀಡಿದರು.
ಕ್ವಿಂಟನ್ ಡಿಕಾಕ್ 40 ರನ್ ಗಳಿಸಿ ವಿವಕೆಟ್ ಒಪ್ಪಿಸಿದರೆ ಸೂರ್ಯಕುಮಾರ್ ಯಾದವ್ 51 ರನ್ ಗಳಿಸಿದರು. ಇದರ ಬೆನ್ನಲ್ಲೇ ಕಿರಾನ್ ಪೊಲಾರ್ಡ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಡೆಲ್ಲಿ ಡೆಲ್ಲಿ ತಂಡ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿದ ಕಂಡುಕೊಂಡಂತೆ ಭಾಸವಾಯಿತು. ಕೃನಾಲ್ ಪಾಂಡ್ಯ ಕೂಡ 130 ರನ್‌ಗಳಿಗೆ ಅಟ ಮುಗಿಸಿದರು.
ಆದರೆ ಈ ಸಂದರ್ಭದಲ್ಲಿ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಸಿಕ್ಸರ್‌ಗಳ ಸುರಿಮಳೆ ಸುರಿಸಲು ಆರಂಭಿಸಿದರು. 30 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 55 ರನ್ ಬಾರಿಸಿದರೆ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 37 ರನ್ ಸಿಡಿಸಿದರು. ಈ ಸಾಹಸದಿಂದ ಮುಂಬೈ 20 ಓವರ್‌ಗಳಲ್ಲಿ ಭರ್ತಿ 200 ರನ್ ಗಳಿಸಲು ಸಾಧ್ಯವಾಯಿತು. ಈ ಜೋಡಿ ಅಂತಿಮ 23 ಎಸೆತಗಳಲ್ಲಿ ಭರ್ಜರಿ 60 ರನ್‌ಗಳನ್ನು ಕಲೆ ಹಾಕಿತು.
ಡೆಲ್ಲಿ ತಂಡದ ಪರವಾಗಿ ಆರ್ ಅಶ್ವಿನ್ ಅದ್ಭುತ ಪ್ರದರ್ಶನವನ್ನು ನೀಡಿದರು. ರೋಹಿತ್ ಶರ್ಮಾ ಹಾಗೂ ಕಿರಾನ್ ಪೋಲಾರ್ಡ್ ಅವರನ್ನು ಸೊನ್ನೆಗೆ ಔಟ್ ಮಾಡಿದ್ದಲ್ಲದೆ ಕ್ವಿಂಟನ್ ಡಿಕಾಕ್ ವಿಕೆಟ್ ಕೂಡ ಪಡೆದರು. ಉಳಿದಂತೆ ಡೆಲ್ಲಿಯ ಭರವಸೆಯ ಬೌಲರ್‌ಗಳಾದ ರಬಡಾ, ನೋರ್ಕಿಯಾ ಡೇನಿಯಲ್ ಸ್ಯಾಮ್ಸ್ ಎಲ್ಲರೂ ದುಬಾರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications