ಐಪಿಎಲ್ ಪ್ಲೇಆಫ್: ಮುಂಬೈ vs ಡೆಲ್ಲಿ, ಗೆಲ್ಲುವ ಅವಕಾಶ ಹೆಚ್ಚಿರುವ ತಂಡವನ್ನು ಹೆಸರಿಸಿದ ಓಝಾ

ಐಪಿಎಲ್‌ನ 13ನೇ ಆವೃತ್ತಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಗುರುವಾರದಿಂದ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯಲಿದ್ದು ಮೊದಲಿಗೆ ಕ್ವಾಲಿಫೈಯರ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಎರಡು ತಂಡಗಳ ಬಲಾಬಲದ ಬಗ್ಗೆ ಮಾಜಿ ಟೀಮ್ ಇಂಡಿಯಾ ಸ್ಪಿನ್ನರ್ ಪ್ರಗ್ಯಾನ್ ಓಝಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡಿದ ಓಝಾ "ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದೆ. ಆದರೆ ಪ್ಲೇಆಫ್‌ನಲ್ಲಿ ಮುಂಬೈ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ಉತ್ತಮ ಪಂದ್ಯವಾಗಿರಲಿದೆ" ಎಂದಿದ್ದಾರೆ.
"ಕ್ರೀಡೆ ಯಾವಾಗಲೂ ಅನಿರೀಕ್ಷಿತವಾಗಿಯೇ ಇರುತ್ತದೆ. ಅತ್ಯುತ್ತಮ ತಂಡವೆನಿಸಿದ್ದರೂ ಗೆಲುವು ಸಾದ್ಯವಾಗದೇ ಇರಬಹುದು. ಮುಂಬೈ ಇಮಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಗೆಲ್ಲುವ ಹೆಚ್ಚಿನ ಅವಕಾಶಗಳನ್ನು ಪ್ರತಿಶತದ ರಿತಿಯಲ್ಲಿ ನೋಡೊದರೆ ಅದು ಖಂಡಿತಾ ಮುಂಬೈಗೆ ಹೆಚ್ಚಿನ ಅವಕಾಶವಿದೆ. ಆದರೆ ಡೆಲ್ಲಿ ಕೂಡ ಅತ್ಯುತ್ತಮ ತಂಡವಾಗಿದೆ" ಎಂದಿದ್ದಾರೆ ಓಝಾ.
"ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಮುಂಬೈಗೆ ಹೋಲಿಸಿದರೆ ಸಾಕಷ್ಟು ಅಸ್ಥಿರತೆಯಿಂದ ಕೂಡಿದೆ. ಅಲ್ಲಿ ಯಶಸ್ಸನ್ನು ಸಾಧಿಸಿದರೆ ಭಾರೀ ಪೈಪೋಟಿಯನ್ನು ಕಾಣಬಹುದಾಗಿದೆ. ಆದರೆ ಇಲ್ಲಿಯವರೆಗಿನ ಪ್ರದರ್ಶನವನ್ನು ದೃಷ್ಠಿಯಲ್ಲಿಟ್ಟುಕೊಂಡು ಹೇಳುವುದಾದರೆ ಮುಂಬೈಗೆ ಹೆಚ್ಚಿನ ಅವಕಾಶವಿದೆ ಎಂದು ಭಾವಿಸುತ್ತೇನೆ" ಎಂದು ಓಝಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದೊಂದು ಅತ್ಯುತ್ತಮ ಪಂದ್ಯವಾಗಿರಲಿದೆ ಎಂದು ಹೇಳಿದ ಓಝಾ ಕ್ವಾಲಿಫೈಯರ್ ಹಂತದ ಅತ್ಯುತ್ತಮ ಸಂಗತಿಯೆಂದರೆ ಸೋತ ತಂಡಕ್ಕೂ ಎರಡನೇ ಅವಕಾಶ ದೊರೆಯಲಿದೆ. ಅವರು ಖಂಡಿತಾ ಕಠಿಣ ಪೈಪೋಟಿಯನ್ನು ನೀಡಲಿದ್ದಾರೆ. ಆದರೆ ಗೆಲುವು ಸಾಧ್ಯವಾಗದಿದ್ದರೆ ಅವರಿಗೆ ಫೈನಲ್‌ಗೆ ಪ್ರವೇಶವನ್ನು ಪಡೆಯಲು ಮತ್ತೊಂದು ಅವಕಾಶ ದೊರೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications