ಐಪಿಎಲ್ 2020: ಹೈದರಾಬಾದ್ ಸೋಲಿಸಿ 6ನೇ ಸ್ಥಾನಕ್ಕೇರಿದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 13ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದ ಚಾಂಪಿಯನ್ ತಂಡ ಮುಂಬೈ ಇಂಡಿಯನ್ ನಿನ್ನೆ ಮತ್ತೆ ನಂ1 ಸ್ಥಾನಕ್ಕೇರಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 20 ರನ್ ಗಳಿಂದ ಗೆಲುವು ಸಾಧಿಸಿದ ಚೆನ್ನೈ 6ನೇ ಸ್ಥಾನಕ್ಕೇರಿದೆ.
ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ಅಕ್ಟೋಬರ್ 13ರಂತೆ: ವಾರ್ನರ್ ಪಡೆ ವಿರುದ್ಧ ಧೋನಿ ಬಳಗ ಗೆಲುವು ಸಾಧಿಸಿದ ಬಳಿಕ ಟಾಪ್ 4ರಲ್ಲಿ ಯಾವುದೆ ಬದಲಾವಣೆಯಾಗಿಲ್ಲ. ಈ ಪಂದ್ಯದಲ್ಲಿ ಸೋತರೂ ಹೈದರಾಬಾದ್ 5ನೇ ಸ್ಥಾನದಲ್ಲಿ ಉಳಿದಿದೆ. ಮುಂಬೈ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು, 10 ಅಂಕ ರನ್ ಸರಾಸರಿ (+ 1.327) ಹೊಂದಿದೆ. 7 ಪಂದ್ಯಗಳಿಂದ 5 ಗೆಲುವು ಸಾಧಿಸಿರುವ ಡೆಲ್ಲಿ 10 ಅಂಕ ಗಳಿಸಿದ್ದು, ರನ್ ಸರಾಸರಿ (+1.038)ಯೊಂದಿಗೆ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನಕ್ಕೇರಿರುವ ಆರ್ ಸಿಬಿ 10 ಅಂಕ (+0.016 ರನ್ ಸರಾಸರಿ) ಗಳಿಸಿದ್ದರೆ, ನಾಲ್ಕನೇ ಸ್ಥಾನಕ್ಕೆ ಕುಸಿದ ಕೆಕೆಆರ್ ಕೂಡಾ 8 ಅಂಕ ಪಡೆದಿದ್ದು, ರನ್ ಸರಾಸರಿ (-0.577) ಕೆಕೆಆರ್ ಗಿಂತ ಕಡಿಮೆ ಇದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ
ಈ ಪಂದ್ಯಕ್ಕೂ ಮುನ್ನ 7ನೇ ಸ್ಥಾನದಲ್ಲಿದ್ದ ಚೆನ್ನೈ ಇಂದು 8 ಪಂದ್ಯಗಳಲ್ಲಿ 3ನೇ ಜಯ ದಾಖಲಿಸಿ 6 ಅಂಕಗಳೊಂದಿಗೆ (-0.390)6ನೇ ಸ್ಥಾನಕ್ಕೇರಿದೆ. 5ನೇ ಸ್ಥಾನದಲ್ಲಿ ಉಳಿದ ಹೈದರಾಬಾದ್ ಕೂಡಾ 8 ಪಂದ್ಯಗಳಲ್ಲಿ 3ನೇ ಜಯ, 5 ಸೋಲು ದಾಖಲಿಸಿ 6 ಅಂಕ ಗಳಿಸಿದೆ (+0.009)

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 7 ಪಂದ್ಯಗಳಿಂದ (387ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 7 ಪಂದ್ಯಗಳಿಂದ (17 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications