ಐಪಿಎಲ್ ಅಂಕಪಟ್ಟಿ: ಕೆಕೆಆರ್ ಪ್ಲೇ ಆಫ್ ಕನಸು ಜೀವಂತ, RR ಔಟ್

ಐಪಿಎಲ್ 2020ನಲ್ಲಿ ನವೆಂಬರ್ 01ರಂದು ನಡೆದ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಅಲ್ಲದೆ ಪ್ಲೇ ಆಫ್ ಹಂತಕ್ಕೇರುವ ಕನಸು ಜೀವಂತಗೊಂಡಿದೆ. ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ನಾಯಕ ಮಾರ್ಗನ್ ಅಬ್ಬರದ ಬ್ಯಾಟಿಂಗ್ ಅಜೇಯ 68 (35 ಎಸೆತ) ನೆರವಿನಿಂದನಿಗದಿತ 20 ಓವರ್ ಗಳಲ್ಲಿ 191/7 ರನ್ ಗಳಿಸಿತು. ರಾಜಸ್ಥಾನ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಂಡು 20 ಓವರ್ ಗಳಲ್ಲಿ 131/9 ರನ್ ಗಳಿಸಿ ಸೋಲೊಪ್ಪಿಕೊಂಡಿತು
ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ನವೆಂಬರ್ 01ರಂತೆ: ರಾಜಸ್ಥಾನ ವಿರುದ್ಧ ಕೋಲ್ಕತಾ ಜಯ ದಾಖಲಿಸಿದ ನಂತರ ಮಾರ್ಗನ್ ಪಡೆಯು 14 ಪಂದ್ಯಗಳಿಂದ 7 ಗೆಲುವು ದಾಖಲಿಸಿ 14 ಅಂಕ ಗಳಿಸಿ 4ನೇ ಸ್ಥಾನಕ್ಕೇರಿದ್ದು, ಇನ್ನೂ ಪ್ಲೇ ಆಫ್ ಗೆ ಹೋಗುವ ಆಸೆ ಜೀವಂತ ಇರಿಸಿಕೊಂಡಿದೆ. ಸ್ಮಿತ್ ಪಡೆ ಈೀ ಪಂದ್ಯದಲ್ಲಿ ಸೋತ ಬಳಿಕ 14 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕಗಳಿಸಿ 8ನೇ ಸ್ಥಾನಕ್ಕೆ ಕುಸಿದಿದೆ.
ಪ್ಲೇ ಆಫ್ ಹಂತ: ಆರ್ ಸಿಬಿ ಹಾಗೂ ಡೆಲ್ಲಿ ಅಂಕಪಟ್ಟಿಯಲ್ಲಿ 2 ಹಾಗೂ ಮೂರನೇ ಸ್ಥಾನದಲ್ಲಿದ್ದು, ಮುಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆಯಲಿದೆ. ಸನ್ ರೈಸರ್ಸ್ ಕೊನೆ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದರೆ 14 ಅಂಕ ಗಳಿಸಿ ಈ ಎರಡು ತಂಡವನ್ನು ಹಿಂದಿಕ್ಕಿ ಪ್ಲೇ ಆಫ್ ಹಂತಕ್ಕೇರಬಹುದಾಗಿದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ
ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 13 ಪಂದ್ಯಗಳಿಂದ (641ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 12 ಪಂದ್ಯಗಳಿಂದ (23 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳಿಂದ 26 ಸಿಕ್ಸರ್ ಸಿಡಿಸಿ ರಾಜಸ್ಥಾನದ ಸಂಜು ಸ್ಯಾಮ್ಸನ್ ಟಾಪ್ ನಲ್ಲಿದ್ದಾರೆ.
ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications