ಐಪಿಎಲ್: ಚೆನ್ನೈ ಸೋಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮುಂಬೈ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 22 ರಂದು ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸುಲಭ ಜಯ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 114/9 ಗಳಿಸಲು ಮಾತ್ರ ಸಾಧ್ಯವಾಯಿತು. ಪೊಲ್ಲಾರ್ಡ್ ಪಡೆ ಆರಂಭಿಕರಾದ ಇಶಾನ್ ಕಿಶನ್ 68ರನ್(37 ಎಸೆತ), ಡಿಕಾಕ್ 46ರನ್ (37 ಎಸೆತ) ಗಳಿಸಿ 10 ವಿಕೆಟ್ ಗಳ ಜಯ ದಾಖಲಿಸಿ 2 ಅಂಕ ತಂದುಕೊಟ್ಟರು.
ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಬದಲಾವಣೆಯಾಗಿದ್ದು, 8 ಸ್ಥಾನದಲ್ಲಿದ್ದ ಧೋನಿ ಪಡೆಯು ಸೋಲಿನೊಂದಿಗೆ ಅಲ್ಲೇ ಉಳಿದಿದೆ.

ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ಅಕ್ಟೋಬರ್ 23ರಂತೆ:ಚೆನ್ನೈ ವಿರುದ್ಧ ಮುಂಬೈ ಜಯ ದಾಖಲಿಸಿದ ನಂತರ ಮುಂಬೈ ತಂಡವು 10 ಪಂದ್ಯಗಳಿಂದ 7 ಗೆಲುವು ದಾಖಲಿಸಿ 14 ಅಂಕ ಹಾಗೂ 1.448 ರನ್ ಸರಾಸರಿಯೊಂದಿಗೆ ಮತ್ತೆ ಮೊದಲ ನಕ್ಕೇರಿದೆ. ಡೆಲ್ಲಿ(0.774) ಕೂಡಾ 14 ಅಂಕ ಗಳಿಸಿದ್ದು 2ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು(0.182) 3ನೇ ಸ್ಥಾನದಲ್ಲಿದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ
ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 10 ಪಂದ್ಯಗಳಿಂದ (540ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 10 ಪಂದ್ಯಗಳಿಂದ (21 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications