ಐಪಿಎಲ್ ಅಂಕಪಟ್ಟಿ: ಪಂಜಾಬ್ ಮಣಿಸಿ 5ನೇ ಸ್ಥಾನಕ್ಕೇರಿದ ರಾಜಸ್ಥಾನ

ಐಪಿಎಲ್ 2020ನಲ್ಲಿ ಅಕ್ಟೋಬರ್ 30ರಂದು ನಡೆದ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವು ಕ್ರಿಸ್ ಗೇಲ್ ಅವರ 99ರನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 185/4 ರನ್ ಗುರಿ ನೀಡಿತು. ರಾಜಸ್ಥಾನ ತಂಡವು ಸಂಘಟಿತ ಆಟ ಪ್ರದರ್ಶಿಸಿ 17.3 ಓವರ್ ಗಳಲ್ಲಿ 186/3 ರನ್ ಗಳಿಸಿ 7 ವಿಕೆಟ್ ಗಳಿಂದ ಜಯ ಗಳಿಸಿತು.
ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ಅಕ್ಟೋಬರ್ 30ರಂತೆ: ಪಂಜಾಬ್ ವಿರುದ್ಧ ರಾಜಸ್ಥಾನ ಜಯ ದಾಖಲಿಸಿದ ನಂತರ ಸ್ಮಿತ್ ಪಡೆಯು 13 ಪಂದ್ಯಗಳಿಂದ 6 ಗೆಲುವು ದಾಖಲಿಸಿ 12 ಅಂಕ ಗಳಿಸಿ 5ನೇ ಸ್ಥಾನಕ್ಕೇರಿದ್ದು, ಇನ್ನೂ ಪ್ಲೇ ಆಫ್ ಗೆ ಹೋಗುವ ಆಸೆ ಜೀವಂತ ಇರಿಸಿಕೊಂಡಿದೆ. ಸತತ ಗೆಲುವು ಸಾಧಿಸಿದ್ದ ರಾಹುಲ್ ಪಡೆ ಈ ಪಂದ್ಯದಲ್ಲಿ ಸೋತ ಬಳಿಕ 13 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕಗಳಿಸಿ 4ನೇ ಸ್ಥಾನದಲ್ಲೇ ಉಳಿದಿದೆ. ಪಂಜಾಬ್ ರನ್ ಸರಾಸರಿ (-0.133) ರಾಜಸ್ಥಾನ(-0.377) ಗಿಂತ ಉತ್ತಮವಾಗಿದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 13 ಪಂದ್ಯಗಳಿಂದ (641ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 12 ಪಂದ್ಯಗಳಿಂದ (23 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳಿಂದ 26 ಸಿಕ್ಸರ್ ಸಿಡಿಸಿ ರಾಜಸ್ಥಾನದ ಸಂಜು ಸ್ಯಾಮ್ಸನ್ ಟಾಪ್ ನಲ್ಲಿದ್ದಾರೆ.
ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications