Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಗೆದ್ದವರಿಗೆ ಸಿಗುವ ಮೊತ್ತ ಪ್ಯಾಟ್ ಕಮಿನ್ಸ್ ಮೌಲ್ಯಕ್ಕಿಂತ ಕಮ್ಮಿ!

IPL 2020 Prize Money is Less Than Pat Cummins’ Fee

ಕೊರೊನಾವೈರಸ್ ಅಡೆತಡೆಗಳ ನಡುವೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಆಯೋಜನೆಗೊಳಿಸಿ ಬಿಸಿಸಿಐ ಭರ್ಜರಿ ಯಶಸ್ಸನ್ನು ಕಂಡಿದೆ. ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ನವೆಂಬರ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಲಿದೆ.

ಕೊವಿಡ್ 19 ಕಾರಣದಿಂದ ಈ ಬಾರಿ ಪ್ರಶಸ್ತಿ ಮೊತ್ತವೂ ಕಡಿತಗೊಂಡಿದೆ. ಕಳೆದ ಬಾರಿ ಐಪಿಎಲ್ ಗೆದ್ದವರ ಜೇಬಿಗೆ ಬಿದ್ದಿದ್ದ ಝಣ ಝಣ ಕಾಂಚಾಣ ಈ ಬಾರಿ ಕಡಿಮೆಯಾಗಲಿದೆ. ಮಾರ್ಚ್ ತಿಂಗಳಿನಲ್ಲಿ ಐಪಿಎಲ್ 2020 ಆಯೋಜನೆ ಬಗ್ಗೆ ನಿರ್ಧರಿಸುವಾಗಲೇ ಬಜೆಟ್ ಕಡಿತದ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸಲಾಯಿತು.

ಐಪಿಎಲ್ ಚಾಂಪಿಯನ್ 2020ಗೆ ಎಷ್ಟು ಸಿಗಲಿದೆ?
ಬಿಸಿಸಿಐ ಅಧಿಕೃತ ಮಾಹಿತಿ ಪ್ರಕಾರ, ಐಪಿಎಲ್ 2020 ಚಾಂಪಿಯನ್ ತಂಡಕ್ಕೆ 20 ಕೋಟಿ ರು ಬದಲಿಗೆ ಈ ಬಾರಿ 10 ಕೋಟಿ ರು ಮಾತ್ರ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 12.50 ಕೋಟಿ ರು ಬದಲಿಗೆ 6.35 ಕೋಟಿ ರು ಲಭಿಸಲಿದೆ.

ದುಬಾರಿ ಆಟಗಾರರು
ಸುಮಾರು ಮೂರು ಆಟಗಾರರು 10 ಪ್ಲಸ್ ಕೋಟಿ ರು ಬೆಲೆ ಬಾಳುತ್ತಾರೆ. ಈ ಬಾರಿ ಕೆಕೆಆರ್ ತಂಡದ ಪ್ಯಾಟ್ ಕಮಿನ್ಸ್ ಅತ್ಯಂತ ದುಬಾರಿ ಆಟಗಾರರಾಗಿದ್ದು, 15.5 ಕೋಟಿ ರು ಮೌಲ್ಯ ಹೊಂದಿದ್ದಾರೆ. ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಗ್ಲೆನ್ ಮ್ಯಾಕ್ಸ್ ವೆಲ್ 10.75 ಕೋಟಿ ರು ಹಾಗೂ ಕೆಕೆಆರ್ ನ ಕ್ರಿಸ್ ಮೋರಿಸ್ 10 ಕೋಟಿ ರು ಬೆಲೆ ಬಾಳುತ್ತಾರೆ. ಹೀಗಾಗಿ ಇವರೆಲ್ಲರೂ ಐಪಿಎಲ್ 2020 ವಿಜೇತ ತಂಡಕ್ಕಿಂತ ಹೆಚ್ಚಿನ ಗಳಿಕೆ ಹೊಂದಿದ್ದಾರೆ.

ಕ್ವಾಲಿಫೈಯರ್ ಹಂತದಲ್ಲಿ ಸೋತ ಎರಡು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ತಲಾ 4.375 ಕೋಟಿ ರು ಗಳಿಸಲಿವೆ. ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಗಳಿಸುವ ಆಟಗಾರರಿಗೆ ನೀಡುವ ಮೊತ್ತದ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ಚಿತ್ರಣ ನೀಡಿಲ್ಲ. ಈ ಮೊತ್ತ ಕೂಡಾ ಕಡಿತಗೊಂಡರೆ ಅಚ್ಚರಿಯೇನಿಲ್ಲ.

ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ವಿಜೇತರಿಗೆ ತಲಾ 10 ಲಕ್ಷ ರು ನೀಡಲಾಗುತ್ತಿತ್ತು. ಹಾಗೂ ಟೂರ್ನಮೆಂಟ್ ನ ಶ್ರೇಷ್ಠ ಆಟಗಾರನಿಗೆ 10 ಲಕ್ಷ ರು ನಿಗದಿಯಾಗಿದೆ. ಆದರೆ ಈ ಬಾರಿ ಈ ಮೊತ್ತಗಳಲ್ಲಿ ಇಳಿಕೆ ಸಾಧ್ಯತೆ ಹೆಚ್ಚಿದೆ.

Story first published: Tuesday, November 10, 2020, 11:59 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+