ಐಪಿಎಲ್ 2020: ರಾಜಸ್ಥಾನ್‌ಗೆ 186 ರನ್‌ಗಳ ಟಾರ್ಗೆಟ್ ನೀಡಿದ ಪಂಜಾಬ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 185 ರನ್‌ಗಳ ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿದೆ. ಕ್ರಿಸ್ ಗೇಲ್ ಸ್ಪೋಟಕ ಬ್ಯಾಟಿಂಗ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್‌ನ ನೆರವಿನಿಂದ ರಾಜಸ್ಥಾನ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ರಾಜಸ್ಥಾನ್ ಯಶಸ್ವಿಯಾಗಿದೆ.
ಆರಂಭಿನಾಗಿ ಕಣಕ್ಕಿಳಿದ ಮನ್‌ದೀಪ್ ಸಿಂಗ್ ಗೋಲ್ಡನ್ ಡಕ್‌ಗೆ ಬಲಿಯಾದರು. ಆದರೆ ಎರಡನೇ ವಿಕೆಟ್‌ಗೆ ಕ್ರಿಸ್ ಗೇಲ್ ಜೊತೆ ಸೇರಿದ ಕೆಎಲ್ ರಾಹುಲ್ ಶತಕದ ಜೊತೆಯಾಟವನ್ನು ನೀಡಿದರು. ಕೆಎಲ್ ರಾಹುಲ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ನಿಕೋಲಸ್ ಪೂರನ್ ಜೊತೆಗೆ ಇನ್ನಿಂಗ್ಸ್ ಮುಂದುವರಿಸಿದ ಗೇಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್ ಹಿಗ್ಗುಸುತ್ತಾ ಹೋದರು. 63 ಎಸೆತಗಳನ್ನು ಎದುರಿಸಿದ ಗೇಲ್ 8 ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿ 99 ರನ್ ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. ಪೂರನ್ 3 ಸಿಕ್ಸರ್ ಸಿಡಿಸಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ 4 ವಿಕೆಟ್ ಕಳೆದುಕೊಂಡು 185ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಈ ಮೊತ್ತವನ್ನು ರಕ್ಷಿಸಿಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ.
ರಾಜಸ್ಥಾನ್ ರಾಯಲ್ಸ್ ಪರವಾಗಿ ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಕಿತ್ತರು. ವರುಣ್ ಅರೋನ್, ಕಾರ್ತಿಕ್ ತ್ಯಾಗಿ ಹಾಗೂ ಶ್ರೇಯಸ್ ಗೋಪಾಲ್ ದುಬಾರಿ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications