Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020, ಕ್ವಾಲಿಫೈಯರ್: ಹೈದರಾಬಾದ್‌ಗೆ ಬೃಹತ್ ಗುರಿ ನೀಡಿದ ಡೆಲ್ಲಿ

ipl 2020, qualifier 2, delhi capitals set good target for sunrisers hydearbad

ಐಪಿಎಲ್‌ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ಗೆ ಉತ್ತಮ ಗುರಿಯನ್ನು ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು. ಈ ಮೂಲಕ 190 ರನ್‌ಗಳಿಸಬೇಕಾದ ಸವಾಲನ್ನು ಹಯದರಾಬಾದ್ ಮುಂದಿಟ್ಟಿದೆ.

ಡೆಲ್ಲಿ ತಂಡದ ಪರವಾಗಿ ಇಂದಿನ ಪಂದ್ಯದಲ್ಲಿ ಆರಮಭಿಕ ಆಟಗಾರರಲ್ಲಿ ಬದಲಾವಣೆಯನ್ನು ಮಾಡಲಾಗಿತ್ತು. ಶಿಖರ್ ಧವನ್‌ಗೆ ಮಾರ್ಕಸ್ ಸ್ಟೋಯ್ನಿಸ್ ಸಾಥ್ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 86 ರನ್‌ಗಳ ಅದ್ಭುತ ಜೊತೆಯಾಟವನ್ನು ನೀಡಿತ್ತು.

ಆರಮಭಿಕ ಆಟಗಾರ ಶಿಖರ್ ಧವನ್ ಇಂದಿನ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. 50 ಎಸೆತಗಳನ್ನು ಎದುರಿಸಿದ ಧವನ್ 78 ರನ್‌ಗಳನ್ನು ಬಾರಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಮಾರ್ಕಸ್ ಸ್ಟೋಯ್ನಿಸ್ 38 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.

ನಾಯಕ ಶ್ರೇಯಸ್ ಅಯ್ಯರ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 21 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. ಬಳಿಕ ಬಂದ ಶಿಮ್ರಾನ್ ಹೇಟ್ಮೇಯರ್ ಸ್ಪೋಟಕ ಪ್ರದರ್ಶನ ನೀಡಿದರು. 22 ಎಸೆತ ಎದುರಿಸಿದ ಶಿಮ್ರಾನ್ 42 ರನ್ ಬಾರಿಸಿದರು. ಈ ಮೂಲಕ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 42 ರನ್ ಬಾರಿಸಲು ಯಶಸ್ವಿಯಾಯಿತು.

ಹೈದರಾಬಾದ್ ತಂಡದ ಪರವಾಗಿ ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಆದರೆ ಹೋಲ್ಡರ್ ಹಾಗೂ ಶಹ್ಬಾಸ್ ನದೀಮ್ ತುಂಬಾ ದುಬಾರಿಯಾದರು.

Story first published: Sunday, November 8, 2020, 21:33 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+