ಐಪಿಎಲ್ ಕ್ವಾಲಿಫೈಯರ್-2: ಡೆಲ್ಲಿ vs ಹೈದರಾಬಾದ್, ಸಂಭಾವ್ಯ ತಂಡಗಳು

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಇಂದು ಗೆಲ್ಲುವ ತಂಡ ನವೆಂಬರ್ 10ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಡೆಲ್ಲಿ ತಂಡ ಇದುವರೆಗೂ ಒಮ್ಮೆಯೂ ಐಪಿಎಲ್ ಫೈನಲ್‌ಗೆ ಪ್ರವೇಶಿಸಿಲ್ಲ. ಈ ಬಾರಿ ಕೆಟ್ಟ ದಾಖಲೆಯನ್ನು ಬಿಚ್ಚಿಡಲು ಅವಕಾಶವಿದೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. 7 pmಗೆ ಟಾಸ್ ನಡೆದರೆ, 7.30ಕ್ಕೆ ಪಂದ್ಯ ನಡೆಯಲಿದೆ.
ಕ್ವಾಲಿಫೈಯರ್ 2ರಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸುವತ್ತ ಎರಡೂ ತಂಡಗಳೂ ಕಣ್ಣಿಟ್ಟಿವೆ. ಸನ್ ರೈಸರ್ಸ್ ಪಂದ್ಯ ನೆಲ್ಲುವ ನಿರೀಕ್ಷೆ ಹೆಚ್ಚಿದೆ.

ಹವಾಮಾನ ವರದಿ
ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಕ್ವಾಲಿಫೈಯರ್ ಪಂದ್ಯ 2 ನಡೆಯುವ ದಿನ ಅಬುಧಾಬಿಯಲ್ಲಿ 35ರಿಂದ 42 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ರಾತ್ರಿ ವೇಳೆ ಕೊಂಚ ತಾಪಮಾನ ಇಳಿದು ಆಟಗಾರರಿಗೆ ನಿರಾಳತೆ ನೀಡಲಿದೆ.

ಪಿಚ್ ರಿಪೋರ್ಟ್
ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಹೆಚ್ಚು ರನ್ ಗಳಿಸಲು ಅವಕಾಶ ನೀಡಿಲ್ಲ. ಇಬ್ಬನಿಯ ಅಂಶ ಪ್ರಭಾವ ಬೀರುವುದರಿಂದ ಟಾಸ್ ಗೆಲ್ಲುವ ನಾಯಕ ಚೇಸಿಂಗ್ ಆರಿಸುವ ಸಾಧ್ಯತೆಯಿದೆ. 160-170 ರನ್ ಗಳಿಸಿದರೆ ಉತ್ತಮ ಮೊತ್ತ ಅನ್ನಿಸಲಿದೆ.

ಹೈದರಾಬಾದ್ ಸಂಭಾವ್ಯ ತಂಡ
ಡೇವಿಡ್ ವಾರ್ನರ್, ಶ್ರೀವಾಟ್ಸ್ ಗೋಸ್ವಾಮಿ / ವೃದ್ಧಿಮಾನ್ ಸಹಾ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಬಾಜ್ ನದೀಮ್, ಟಿ ನಟರಾಜನ್, ಸಂದೀಪ್ ಶರ್ಮಾ.

ಡೆಲ್ಲಿ ಸಂಭಾವ್ಯ ತಂಡ
ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೈಯರ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಆರ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications