ಐಪಿಎಲ್ 2020: ಕ್ರಿಸ್ ಗೇಲ್ ಕಾಲೆಳೆದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕಿಂಗ್ಸ್ XI ಪಂಬಾಬ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಾಲೆಳೆದಿದ್ದಾರೆ. ದುಬೈನಲ್ಲಿ ಮಂಗಳವಾರ (ಅಕ್ಟೋಬರ್ 20) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋತಿತ್ತು. ಈ ಪಂದ್ಯದ ಬಳಿಕ ಅಶ್ವಿನ್, ಗೇಲ್‌ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಿಖರ್ ಧವನ್ 61 ಎಸೆತಗಳಲ್ಲಿ 106 ರನ್ ಬಾರಿಸಿದ್ದರು. ಡಿಸಿ 20 ಓವರ್‌ಗೆ 5 ವಿಕೆಟ್ ಕಳೆದು 164 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ XI ಪಂಜಾಬ್, ಕ್ರಿಸ್ ಗೇಲ್ 29, ನಿಕೋಲಸ್ ಪೂರನ್ 53, ಗ್ಲೆನ್ ಮ್ಯಾಕ್ಸ್‌ವೆಲ್ 32 ರನ್ ಕೊಡುಗೆಯೊಂದಿಗೆ 19 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು.
ಡೆಲ್ಲಿ-ಪಂಜಾಬ್ ಪಂದ್ಯದ ವೇಳೆ ಕೆXIಪಿ ಇನ್ನಿಂಗ್ಸ್‌ನಲ್ಲಿ ಆರ್ ಅಶ್ವಿನ್ ಅವರು ಕ್ರಿಸ್ ಗೇಲ್ ಶೂ ಲೇಸ್ ಕಟ್ಟಿದ್ದರು. ಅದಾಗಿ 5.2ನೇ ಓವರ್‌ನಲ್ಲಿ ಅಶ್ವಿನ್ ಎಸೆತಕ್ಕೇ ಗೇಲ್ ಬೌಲ್ಡ್ ಆಗಿ ನಿರ್ಗಮಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಅಶ್ವಿನ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
'ದೆವ್ವ ಯಾವಾಗಲೂ ವಿವರವಾಗಿರುತ್ತದೆ. ಆತನಿಗೆ ಬೌಲಿಂಗ್ ಮಾಡುವುದಕ್ಕೂ ಮುನ್ನ ಆತನ ಎರಡೂ ಕಾಲುಗಳನ್ನು ನಾನು ಕಟ್ಟಿದ್ದೆ. ಇವತ್ತು ನಮ್ಮ ಪಾಲಿಗೆ ಸವಾಲಿನ ದಿನವಾಗಿತ್ತು. ಆದರೆ ಬಲಿಷ್ಠರಾಗಿ ನಾವು ತಿರುಗಿಬೀಳಲಿದ್ದೇವೆ' ಎಂದು ಟ್ವೀಟ್‌ನಲ್ಲಿ ಅಶ್ವಿನ್ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications