"ಡೆತ್ ಓವರ್‌ನಲ್ಲಿ ರಬಡಾ, ನಾರ್ಕಿಯಾ ಬೌಲಿಂಗ್ ಡೆಲ್ಲಿಯ ಯಶಸ್ಸನ್ನು ನಿರ್ಣಯಿಸಲಿದೆ"

ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಬೌಲರ್ ಬ್ರಾಡ್ ಹಾಗ್ ಐಪಿಎಲ್‌ನ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ಡೆಲ್ಲಿ ತಂಡದ ಪ್ರಮುಖ ಇಬ್ಬರು ಬೌಲರ್‌ಗಳಾದ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಯಾವ ರೀತಿಯಲ್ಲಿ ಜೋಜನೆಯನ್ನು ಕಾರ್ಯಗತಗಳಿಸುತ್ತಾರೆ ಅದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ ಎಂದಿದ್ದಾರೆ.
ಮುಂಬೈ ವಿರುದ್ದದ ಪಂದ್ಯದಲ್ಲಿ ಕಗಿಸೋ ರಬಡಾ ಹಾಗೂ ನಾರ್ಕಿಯಾ ಅವರ ಬೌಲಿಂಗ್ ಪ್ರದರ್ಶನ ಬಹಳ ಮುಖ್ಯವಾಗಿರಲಿದೆ. ಅಂತಿಮ ನಾಲ್ಕು ಓವರ್‌ಗಳನ್ನು ಈ ಇಬ್ಬರು ಬೌಲರ್‌ಗಳು ಯಾವ ರೀತಿಯಲ್ಲಿ ಪೂರ್ಣಗಳಿಸುತ್ತಾರೆ ಎಂಬುದು ಫಲಿತಾಂಶದಲ್ಲಿ ನಿರ್ಣಾಯಕವಾಗಿರಲಿದೆ ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ರಬಡಾ ಹಾಗೂ ನಾರ್ಕಿಯಾ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಮುಖ್ಯ ಅಸ್ತ್ರಗಳಾಗಿದ್ದಾರೆ. ಟೂರ್ನಿಯಲ್ಲಿ ರಬಡಾ 29 ವಿಕೆಟ್ ಪಡೆದು ಅತಿ ಹೆಚ್ಚಿನ ವಿಕೆಟ್ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ನಾರ್ಕಿಯಾ 20 ವಿಕೆಟ್ ಪಡೆದು ಮಿಂಚಿದ್ದಾರೆ.
ಡೆಲ್ಲಿ ತಂಡದ ಪರವಾಗಿ ಈ ಇಬ್ಬರು ಬೌಲರ್‌ಗಳ ಪಾತ್ರ ಮಹತ್ವದ್ದು ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ವೇಗಿಗಳು ಬೌಲಿಂಗ್‌ನಲ್ಲಿ ಉತ್ತಮ ಯಶಸ್ಸನ್ನು ಡೆಲ್ಲಿ ನೀಡಿದರೆ ಡೆಲ್ಲಿ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಐಪಿಎಲ್‌ನ ಚಾಂಪಿಯನ್ ತಂಡ ಎನಿಸಿದೆ. ಆದರೆ ಡೆಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶ ಪಡೆದಿದ್ದು ಮೊದಲ ಬಾರಿ ಅದೃಷ್ಠ ಯಾವ ರೀತಿ ಇದೆ ಎಂದು ಪರೀಕ್ಷೆಗೆ ಒಳಗಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications