Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿ ತೆವಾಟಿಯಾಗೆ ಪ್ರೀತಿಯ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ಕ್ರಿಕೆಟ್ ಜಗತ್ತಿನಲ್ಲಿ ಉಗ್ರ ಪ್ರತಾಪಿ ಎಂದೇ ಚಿರಪರಿಚಿತರಾಗಿರುವ ವಿರಾಟ್ ಕೊಹ್ಲಿ ಅವರು ತಮಗಿಂತ ಕಿರಿಯ ಆಟಗಾರರ ಕರೆಗೆ ಸದಾ ಸ್ಪಂದಿಸುತ್ತಲೇ ಇರುತ್ತಾರೆ. ವಿಶ್ವ ಟಿ20 ಸಂದರ್ಭದಲ್ಲಿ ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮೀರ್ ಅವರಿಗೆ ಬ್ಯಾಟ್ ಗಿಫ್ಟ್ ಕೊಟ್ಟಿದ್ದರು. ಈಗ ಐಪಿಎಲ್ 2020ರ ನವತಾರೆ ರಾಹುಲ್ ತೇವಾಟಿಯಾ ಅವರಿಗೆ ಪ್ರೀತಿಯ ಗಿಫ್ಟ್ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಅವರು ರಾಜಸ್ಥಾನ್ ರಾಯಲ್ಸ್ (ಆರ್ ಆರ್ ) ಆಲ್‌ರೌಂಡರ್ ರಾಹುಲ್ ತೇವಾಟಿಯಾ ಅವರಿಗೆ ಉಡುಗೊರೆಯಾಗಿ ನೀಡಿದ ಚಿತ್ರವನ್ನು ಐಪಿಎಲ್ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ತೆವಾಟಿಯಾ ಅವರ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಸಂತಸ ವ್ಯಕ್ತಪಡಿಸಿ, ಆಟೋಗ್ರಾಫ್ ಹಾಕಿರುವ ಆರ್ ಸಿಬಿ ಜರ್ಸಿಯನ್ನು ನೀಡಿದ್ದಾರೆ. ಅದರಲ್ಲಿ 'ಪ್ರಿಯ ರಾಹುಲ್ .. ಶುಭಾಶಯಗಳು' ಎಂದು ಬರೆಯಲಾಗಿದೆ. ರಾಜಸ್ಥಾನ ಮತ್ತು ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನವನ್ನು ಬೆಂಗಳೂರು ತಂಡ 8 ವಿಕೆಟ್ ಗಳಿಂದ ಮಣಿಸಿದೆ. ಜೊತೆಗೆ ಕೊಹ್ಲಿ ಕೂಡಾ ಲಯಕ್ಕೆ ಮರಳಿದ್ದು ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದರು.

ಒಂದು ಓವರ್ ನಲ್ಲೇ ಜೀರೋ ನಿಂದ ಹೀರೋ

ಒಂದು ಓವರ್ ನಲ್ಲೇ ಜೀರೋ ನಿಂದ ಹೀರೋ

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಟಾರ್ಗೆಟ್ ಚೇಸ್ ಮಾಡುವಾಗ ಮೊದಲಿಗೆ ನಿಧಾನವಾಗಿ ಆಡುತ್ತಾ ತಿಣಕಾಡುತ್ತಿದ್ದ ರಾಹುಲ್ ತೇವಾಟಿಯಾರನ್ನು ರಾಯಲ್ಸ್ ಅಭಿಮಾನಿಗಳನ್ನು ಶಪಿಸಿದ್ದರು. ಮೊದಲ 19 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ ತೇವಾಟಿಯಾ ನಂತರ 12 ಎಸೆತಗಳಲ್ಲಿ 45 ರನ್ ಗಳಿಸಿದರು. ಪಂಜಾಬ್ ಬೌಲರ್ ಶೆಲ್ಡನ್ ಕಾಟ್ರೆಲ್ 18 ನೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದರು. ಇದರೊಂದಿಗೆ, ತೆವಾಟಿಯಾ ಸ್ಟಾರ್ ಆಗಿ ಬಿಟ್ಟರು.

ಆರ್ ಸಿಬಿ ವಿರುದ್ಧವೂ ಸಿಕ್ಸರ್ ಬಾರಿಸಿದರು

ಆರ್ ಸಿಬಿ ವಿರುದ್ಧವೂ ಸಿಕ್ಸರ್ ಬಾರಿಸಿದರು

ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಹುಲ್ ತೇವಾಟಿಯಾ 12 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್ ನಲ್ಲಿ 4 ಓವರ್ ಗಳಲ್ಲಿ 28ರನ್ ಹೊಡೆಸಿಕೊಂಡು ಯಾವುದೇ ವಿಕೆಟ್ ಗಳಿಸಲಿಲ್ಲ.

ಪಂದ್ಯದ ನಂತರ ವಿರಾಟ್ ಕೊಹ್ಲಿ ಮಾತನಾಡಿ

ಪಂದ್ಯದ ನಂತರ ವಿರಾಟ್ ಕೊಹ್ಲಿ ಮಾತನಾಡಿ ... 'ಈ ಗೆಲುವಿನೊಂದಿಗೆ ಬಂದ ಎರಡು ಅಂಶಗಳು ಬಹಳ ಮುಖ್ಯ. ಒಂದೇ ಅಲ್ಲ. ಲೀಗ್‌ನ ಪ್ರತಿಯೊಂದು ಹಂತವೂ ನಿರ್ಣಾಯಕ. ಪ್ರಬಲ ಎದುರಾಳಿಯ ವಿರುದ್ಧದ ಗೆಲುವು ನಮ್ಮ ತಂಡದ ಮೇಲಿನ ವಿಶ್ವಾಸವನ್ನು ದ್ವಿಗುಣಗೊಳಿಸಿತು. ದುಬೈಗೆ ಹೋಲಿಸಿದರೆ ಅಬುಧಾಬಿಯಲ್ಲಿ ತಾಪಮಾನ ಹೆಚ್ಚಾಗಿದೆ. ಪಂದ್ಯದ ಪ್ರದರ್ಶನದಿಂದ ನಾವೆಲ್ಲರೂ ಸಂತೋಷವಾಗಿದ್ದೇವೆ' ಎಂದರು.

ಗೇಮ್ ಚೇಂಜರ್ ತೆವಾಟಿಯಾ

ಗೇಮ್ ಚೇಂಜರ್ ತೆವಾಟಿಯಾ

2014ರಲ್ಲೇ ಐಪಿಎಲ್ ಹರಾಜಿನಲ್ಲಿ ಅದೃಷ್ಟ ಖುಲಾಯಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. 2017ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡಿದ್ದರು. 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ತೇವಾಟಿಯಾರನ್ನು ಟ್ರೇಡ್ ಮಾಡಿ ಪುನಃ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕರೆಸಿಕೊಳ್ಳಲಾಯಿತು. ರಾಜಸ್ಥಾನ ತಂಡದ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆ ಹುಸಿಯಾಗಿಲ್ಲ, ನನ್ನನ್ನು ಗೇಮ್ ಚೇಂಜರ್ ಎಂದು ಕರೆದರು ಇದರಿಂದ ನನ್ನ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ ಎಂದು ರಾಹುಲ್ ತೇವಾಟಿಯಾ ಹೇಳಿದ್ದಾರೆ.

Story first published: Monday, October 5, 2020, 10:05 [IST]
Other articles published on Oct 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+