Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: 10 ವರ್ಷಗಳ ಬಳಿಕ ವಿಶಿಷ್ಠ ದಾಖಲೆ ಬರೆದ ಆರ್‌ಆರ್‌

IPL 2020: Rajasthan Royals post their 2nd biggest win over CSK

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅತ್ಯಧಿಕ ರನ್ ಟೋಟಲ್ ಗಳಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶಿಷ್ಠ ದಾಖಲೆಗೆ ಕಾರಣವಾಗಿದೆ. ಸುಮಾರು 10 ವರ್ಷಗಳ ಬಳಿಕ ಸಿಎಸ್‌ಕೆಗೆ ದೊಡ್ಡ ರನ್ ಗುರಿ ನೀಡಿ ಪಂದ್ಯ ಗೆದ್ದುಕೊಂಡಿದೆ. ಅಷ್ಟೇ ಅಲ್ಲ, ಈ ಸೀಸನ್‌ನಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ರನ್ ಆಗಿ ಆರ್‌ಆರ್ ಬಾರಿಸಿದ 216 ರನ್ ಗುರುತಿಸಲ್ಪಟ್ಟಿದೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಮಂಗಳವಾರ ಶಾರ್ಜಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 16 ರನ್ ಜಯ ಗಳಿಸಿತು. ಆರ್‌ಆರ್‌ ತಂಡ ಚೆನ್ನೈ ಗೆಲುವಿಗೆ 217 ರನ್ ಗುರಿ ನೀಡಿತ್ತಾದರೂ ಸಿಎಸ್‌ಕೆ 200 ರನ್ ಬಾರಿಸಿ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಆರ್‌ನಿಂದ ಸ್ಟೀವ್ ಸ್ಮಿತ್ 69 (47 ಎಸೆತ), ಸಂಜು ಸ್ಯಾಮ್ಸನ್ 74 (32 ಎಸೆತ, 9 ಸಿಕ್ಸರ್), ಜೋಫ್ರಾ ಆರ್ಚರ್ 27 (8 ಎಸೆತ, 4 ಸಿಕ್ಸರ್) ರನ್ ಕೊಡುಗೆಯಿತ್ತರು. ಹೀಗಾಗಿ ರಾಜಸ್ಥಾನ್ ತಂಡ ಉತ್ತಮ ಟೋಟಲ್ ಪೇರಿಸುವಲ್ಲಿ ಶಕ್ತವಾಯ್ತು.

ಅಂದ್ಹಾಗೆ, 10 ವರ್ಷಗಳ ಹಿಂದೆ ಆರ್‌ಆರ್ ತಂಡ ಸಿಎಸ್‌ಕೆ ವಿರುದ್ಧ ಅತ್ಯಧಿಕ ರನ್ ಟೋಟಲ್ ಗಳಿಸಿತ್ತು ಅಂದೆವಲ್ಲ? ಆ ಪಂದ್ಯ ನಡೆದಿದ್ದು 2010ರ ಏಪ್ರಿಲ್ 3ರಂದು ಚೆನ್ನೈನಲ್ಲಿ. ಪಂದ್ಯದಲ್ಲಿ ಸಿಎಸ್‌ಕೆ 246 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಆರ್‌ 223 ರನ್ ಬಾರಿಸಿ 23 ರನ್‌ನಿಂದ ಸೋತಿತ್ತು.

Story first published: Wednesday, September 23, 2020, 15:40 [IST]
Other articles published on Sep 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+