ಐಪಿಎಲ್: ಹರ್ಷಭೋಗ್ಲೆ ಟ್ವೀಟ್‌ಗೆ ರಾಜಸ್ಥಾನ್ ರಾಯಲ್ಸ್ ಪ್ರತಿಕ್ರಿಯೆ

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದಿಂದ ದಿನೇಶ್ ಕಾರ್ತಿಕ್ ಕೆಳಗಿಳಿದಿದ್ದಾರೆ. ಕಾರ್ತಿಕ್ ಜಾಗಕ್ಕೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಬಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ತನ್ನ ನಾಯಕನನ್ನು ಬದಲಿಸಲಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸದ್ಯ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ನಾಯಕರಾಗಿದ್ದಾರೆ. ಸ್ಮಿತ್ ನಾಯಕತ್ವದಲ್ಲಿ ಆರ್‌ಆರ್ ಟೂರ್ನಿ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದರೆ ಟೂರ್ನಿ ಮುಂದುವರೆದಂತೆ ಸೋಲಿನ ಸುಳಿಯೊಳಗೆ ಸಿಲುಕಿತ್ತು. ಸಾಲು ಸಾಲು ಪಂದ್ಯಗಳನ್ನು ಸೋತಿತ್ತು.
ಕೆಕೆಆರ್‌ನಂತೆ ಆರ್‌ಆರ್ ಕೂಡ ನಾಯಕನನ್ನು ಬದಲಿಸುವ ಸಾಧ್ಯತೆಯಿದೆ ಎಂದು ಕಾಮೆಂಟೇಟರ್, ಪತ್ರಕರ್ತ ಹರ್ಷಭೋಗ್ಲೆ ಟ್ವೀಟ್ ಮಾಡಿದ್ದರು. ಆ ಬಳಿಕ ತನ್ನ ಟ್ವೀಟ್ ಡಿಲೀಟ್ ಮಾಡಿದ್ದ ಭೋಗ್ಲೆ, ಆ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದಕ್ಕೋಸ್ಕರ ಟ್ವೀಟ್ ಡಿಲೀಟ್ ಮಾಡಿದ್ದೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಆರ್‌ಆರ್ ತನ್ನ ಕ್ಯಾಪ್ಟನ್ ಬದಲಿಸಲಿದೆ ಎಂಬ ಹರ್ಷಭೋಗ್ಲೆ ಸುಳಿವಿಗೆ ತಕ್ಕಂತೆ ರಾಜಸ್ಥಾನ್ ಕೂಡ ಒಂದು ಟ್ವೀಟ್ ಮಾಡಿದೆ. 'ಜೋಸ್ ಬಟ್ಲರ್ ಕಾಫಿ ಕಪ್ ಹಿಡಿದಿರುವ ಫೋಟೋ ಹಂಚಿಕೊಂಡಿರುವ ಆರ್ಆರ್, ಜೋಸ್ ನಂತ ಬಾಸ್‌ಗೆ ಧನ್ಯವಾದಗಳು' ಎಂದು ಬರೆದುಕೊಂಡಿದೆ. ಅಂದರೆ ಇದು ಹರ್ಷಭೋಗ್ಲೆ ನೀಡಿದ್ದ ಸುಳಿವಿನ ಮುಂದುವರೆದ ಭಾಗದಂತೆ ತೋರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications