ಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋ

ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಗಳು ನಡೆದಿದ್ದಿದೆ. ಆಟಗಾರರು ಚಿತ್ರ ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದನ್ನು ನಾವು ನೋಡಿದ್ದೇವೆ. ಇಂಥದ್ದೇ ಒಂದು ವಿಭಿನ್ನ ಕ್ಷಣಕ್ಕೆ ಮಂಗಳವಾರ (ಅಕ್ಟೋಬರ್ 13) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ 29ನೇ ಪಂದ್ಯ ಸಾಕ್ಷಿಯಾಗಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಿದ್ದವು.
ಈ ವೇಳೆ ಹೈದರಾಬಾದ್ ಆಲ್ ರೌಂಡರ್ ರಶೀದ್ ಖಾನ್ ಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್ ಆಗಿ ಗಮನ ಸೆಳೆದಿದ್ದಾರೆ. ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನಟ್ಟಿದ ಎಚ್‌ಆರ್‌ಎಚ್ ಪರ ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರಶೀದ್ ಖಾನ್, 18.6ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ 14 ರನ್‌ಗೆ ನಿರ್ಗಮಿಸಿದರು.
ರಶೀದ್ ಅವರಿಗೆ ಹಿಟ್ ವಿಕೆಟ್ ಅಂತ ಔಟ್ ನೀಡಲಾಯಿತಾದರೂ ಅಸಲಿಗೆ ರಶೀದ್ ಎರಡೆರಡು ಸಾರಿ ಔಟ್ ಅನ್ನಿಸಿದ್ದರು.

ಹಿಟ್ ವಿಕೆಟ್ ಆದ ರಶೀದ್
ಶಾರ್ದೂಲ್ ಠಾಕೂರ್ ಎಸೆತಕ್ಕೆ ದೊಡ್ಡ ದೊಡೆತ ಕೊಡಲು ರಶೀದ್ ಮುಂದಾದಾದಲೇ ಅವರ ಕಾಲು ವಿಕೆಟ್‌ಗೆ ತಾಗಿ ಬೇಲ್ಸ್ ಎಗರಿಸಿತ್ತು. ಅಷ್ಟೇ ಅಲ್ಲ, ರಶೀದ್ ಬ್ಯಾಟ್‌ಗೆ ತಾಗಿದ ಚೆಂಡು ಸೀದಾ ಹೋಗಿ ದೀಪಕ್ ಚಹಾರ್ ಕೈ ಸೇರಿತು.
ಎರಡು ರೀತಿಯಲ್ಲಿ ಔಟ್
ಅಂದರೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ರಶೀದ್ ಹಿಟ್ ವಿಕೆಟ್ ಮತ್ತು ಕ್ಯಾಚ್ ನೀಡಿ ಎರಡೂ ರೀತಿಯಲ್ಲಿ ರಶೀದ್ ಔಟಾಗಿದ್ದರು. ಆದರೆ ಮೊದಲು ಹಿಟ್ ವಿಕೆಟ್ ಆಗಿದ್ದರಿಂದ ಆ ಮೂಲಕವೇ ಔಟ್ ನೀಡಲಾಯ್ತು. ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್ ಜಯ ದಾಖಲಿಸಿತು.

ವಾಟ್ಸನ್, ರಾಯುಡು ಆಟ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಸ್ಯಾಮ್ ಕರನ್ 31, ಶೇನ್ ವಾಟ್ಸನ್ 42, ಅಂಬಾಟಿ ರಾಯುಡು 41, ಎಂಎಸ್ ಧೋನಿ 21, ರವೀಂದ್ರ ಜಡೇಜಾ 25 ರನ್ ಬಾರಿಸಿದರು. ಸಿಎಸ್‌ಕೆ 20 ಓವರ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು.

ವಿಲಿಯಮ್ಸನ್ ಹೋರಾಟ ವ್ಯರ್ಥ
ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದಾಬಾದ್‌ನಿಂದ ಜಾನಿ ಬೇರ್ಸ್ಟೋವ್ 23, ಕೇನ್ ವಿಲಿಯಮ್ಸನ್ 57, ಪ್ರಿಯಂ ಗರ್ಗ್ 16, ವಿಜಯ್ ಶಂಕರ್ 12, ರಶೀದ್ ಖಾನ್ 12 ರನ್ ಕೊಡುಗೆ ನೀಡಿದರು. ಎಸ್‌ಆರ್‌ಎಚ್ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 147 ರನ್ ಬಾರಿಸಿ ಶರಣಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications