Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾ

IPL 2020: Ravindra Jadeja 73 runs away from being in a league of his own

ನವದೆಹಲಿ: ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಬ್ಬ ಆರಂಭವಾಗಲಿದೆ. 13ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಆರಂಭಿಕ ಪಂದ್ಯದಲ್ಲೇ ಅಪರೂಪದ ದಾಖಲೆ ನಿರ್ಮಿಸಲು ಸಿಎಸ್‌ಕೆ ಆಲ್ ರೌಂಡರ್ ರವೀಂದ್ರ ಜಡೇಜಾಗೆ ಅವಕಾಶವಿದೆ.

2020ರ ಐಪಿಎಲ್ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಈ ಬಾರಿ ಟೂರ್ನಿ ಆರಂಭವಾಗುತ್ತಲೇ ರವೀಂದ್ರ ಜಡೇಜಾ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಜಡೇಜಾ 73 ರನ್ ಗಳಿಸಿದರೆ ಐಪಿಎಲ್‌ನಲ್ಲಿ 2000 ರನ್ ಪೂರೈಸಿದ ದಾಖಲೆಗೆ ಜಡೇಜಾ ಕಾರಣರಾಗಲಿದ್ದಾರೆ.

ಜಡ್ಡು ಒಂದು ವೇಳೆ ಈ ದಾಖಲೆ ಪೂರೈಸಿದರೆ, ಐಪಿಎಲ್‌ನಲ್ಲಿ 2000+ ರನ್ ಮತ್ತು 100+ ವಿಕೆಟ್ ಪಡೆದ ಮೊದಲ ಆಲ್‌ ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜಡೇಜಾ ಸದ್ಯ 128 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 1927 ರನ್, 142 ಇನ್ನಿಂಗ್ಸ್‌ಗಳಲ್ಲಿ 108 ವಿಕೆಟ್ ದಾಖಲೆ ಹೊಂದಿದ್ದಾರೆ.

108 ವಿಕೆಟ್‌ ಪಡೆದಿರುವ ಜಡೇಜಾ, ಐಪಿಎಲ್ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಐಪಿಎಲ್‌ನಲ್ಲಿ 50ಕ್ಕೂ ಕಡಿಮೆ ರನ್ (ಅತೀ ಹೆಚ್ಚು ರನ್ 48) ಬಾರಿಸಿ 1500 ರನ್ ಬಾರಿಸಿರುವ ಒಬ್ಬನೇ ಆಟಗಾರನಾಗಿಯೂ ಜಡೇಜಾ ಗುರುತಿಸಿಕೊಂಡಿದ್ದಾರೆ.

Story first published: Friday, September 18, 2020, 10:02 [IST]
Other articles published on Sep 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+