Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ವಿಶಿಷ್ಟ ದಾಖಲೆ ಬರೆದ ಚೆನ್ನೈ ಆಲ್ ರೌಂಡರ್ ರವೀಂದ್ರ ಜಡೇಜಾ

IPL 2020: Ravindra Jadeja Becomes First Player to Score 2000 Runs And get 110 Wickets

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಲ್ ರೌಂಡರ್ ಗಳ ಪಾತ್ರ ಮಹತ್ವವಾದದ್ದು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರವೀಂದ್ರ ಜಡೇಜಾ ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಐಪಿಎಲ್ ಆಡಲು ಶುರು ಮಾಡಿ 13 ವರ್ಷಗಳ ನಂತರ ಮೊದಲ ಅರ್ಧಶತಕ ಗಳಿಸಿ ಅಚ್ಚರಿಯ ದಾಖಲೆ ಬರೆದ ಬಳಿಕ ಮತ್ತೊಂದು ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ 2000+ ರನ್ ಮತ್ತು 100+(110) ವಿಕೆಟ್ ಪಡೆದ ಮೊದಲ ಆಲ್‌ ರೌಂಡರ್ ಎಂಬ ಸಾಧನೆಗೆ ಜಡೇಜಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2000 ರನ್ ಹಾಗೂ 50 ಪ್ಲಸ್ ವಿಕೆಟ್ ಗಳಿಸಿದ ಪಟ್ಟಿಯಲ್ಲಿ ನಾಲ್ವರು ಆಲ್ ರೌಂಡರ್ಸ್ ಇದ್ದಾರೆ. ಶೇನ್ ವಾಟ್ಸನ್, ಕಿರಾನ್ ಪೊಲ್ಲಾರ್ಡ್ ಹಾಗೂ ಜಾಕ್ ಕಾಲಿಸ್ ಅವರನ್ನು ಮುಂದಿಕ್ಕಿ ಜಡೇಜಾ 100 ಪ್ಲಸ್ ವಿಕೆಟ್ ಗಳಿಸಿದ್ದಾರೆ.

ಇದಲ್ಲದೆ, ಐಪಿಎಲ್‌ನಲ್ಲಿ 50ರನ್ ಗಳಿಸದೇ (ಅತೀ ಹೆಚ್ಚು ರನ್ 48) 1500 ರನ್ ಬಾರಿಸಿರುವ ಒಬ್ಬನೇ ಆಟಗಾರನಾಗಿಯೂ ಜಡೇಜಾ ಗುರುತಿಸಿಕೊಂಡಿದ್ದರು. ಆದರೆ, 13 ಐಪಿಎಲ್ ಸೀಸನ್, 241 ಟಿ20 ಪಂದ್ಯ, 174 ಐಪಿಎಲ್ ಪಂದ್ಯಗಳ ನಂತರ ಮೊದಲ 50 ರನ್ ಗಳಿಸಿದರು.

''ಇಂಥದ್ದೊಂದು ಸಾಧನೆ ಮಾಡಿದ್ದೇನೆ ಎಂದು ತಿಳಿದು ತುಂಬಾ ಸಂತೋಷ, ಡಬ್ಬಲ್ ಸಂತೋಷ ವಾಗಿದೆ. ನಾನು ಇನ್ನಷ್ಟು ಶ್ರಮವಹಿಸಿ ನನ್ನ ತಂಡ, ದೇಶದ ಕೀರ್ತಿ ಹೆಚ್ಚಿಸುತ್ತೇನೆ. ನನ್ನ ಕುಟುಂಬ, ನನ್ನ ಆಟ ಮೆಚ್ಚುವ ಪ್ರೇಕ್ಷಕರಿಗೆ ಧನ್ಯವಾದಗಳು'' ಎಂದು ಜಡೇಜಾ ಹೇಳಿದ್ದಾರೆ.

ಐಪಿಎಲ್ ಸಾಧನೆ:
ಒಟ್ಟಾರೆ 175 ಪಂದ್ಯಗಳಿಂದ 123. 32 ಸ್ಟ್ರೈಕ್ ರೇಟ್ ಹಾಗೂ 24.09 ರನ್ ಸರಾಸರಿಯಂತೆ 2000ರನ್ ಗಳಿಸಿದ್ದಾರೆ. ಗರಿಷ್ಠ ಮೊತ್ತ 50ರನ್.

7.66 ಎಕಾನಾಮಿ, 23.45 ಸ್ಟ್ರೈಕ್ ರೇಟ್ ನಂತೆ 111 ವಿಕೆಟ್ ಕಬಳಿಸಿದ್ದಾರೆ. 3 ಬಾರಿ ಪಂದ್ಯವೊಂದರಲ್ಲಿ 4 ವಿಕೆಟ್ ಹಾಗೂ ಒಮ್ಮೆ 5 ವಿಕೆಟ್ ಗಳಿಸಿದ್ದಾರೆ.

ಅತೀ ಹೆಚ್ಚು ವಿಕೆಟ್ ಪಡೆದವರು:
ಐಪಿಎಲ್ ಅತೀ ಹೆಚ್ಚು ವಿಕೆಟ್ ಪಡೆದ ಟಾಪ್ 10 ಬೌಲರ್ ಗಳ ಪೈಕಿಯಲ್ಲಿ ಜಡೇಜಾ 10ನೇ ಸ್ಥಾನಕ್ಕೇರಿದ್ದಾರೆ. ಮಾಲಿಂಗ 170, ಅಮಿತ್ ಮಿಶ್ರಾ 160, ಪಿಯೂಶ್ ಚಾವ್ಲಾ 156, ಹರ್ಭಜನ್ ಸಿಂಗ್ 150, ಡ್ವಾಯ್ನೆ ಬ್ರಾವೋ 147, ಭುವನೇಶ್ವರ್ ಕುಮಾರ್ 136, ರವಿಚಂದ್ರನ್ ಅಶ್ವಿನ್ 127, ಸುನಿಲ್ ನರೇನ್ 124, ಉಮೇಶ್ ಯಾದವ್ 119, ಜಡೇಜ 111, ಯಜುವೇಂದ್ರ ಚಾಹಲ್ 108 ವಿಕೆಟ್ ಗಳು.

Story first published: Monday, October 5, 2020, 10:04 [IST]
Other articles published on Oct 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+