Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಸಂದೇಶ ಬರೆದ ರವೀಂದ್ರ ಜಡೇಜಾ

IPL 2020: Ravindra Jadeja posts inspiring message on Instagram

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ ಪಾಲಿಗೆ ಈ ಬಾರಿಯದ್ದು ಕೆಟ್ಟ ಸೀಸನ್ ಅನ್ನಿಸಿದೆ. ಐಪಿಎಲ್‌ನಲ್ಲಿ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಸಿಎಸ್‌ಕೆ ಈ ಬಾರಿ ಸತತ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.

ತಂಡದ ಪ್ರಮುಖ ಆಲ್ ರೌಂಡರ್ ಸುರೇಶ್ ರೈನಾ ಈ ಬಾರಿಯ ಟೂರ್ನಿ ಆರಂಭದಲ್ಲೇ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ಆ ಬಳಿಕ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡ ತಾನು ಆಡುತ್ತಿಲ್ಲ ಎಂದಿದ್ದರು. ಇದೀಗ ಸೋಲಿನ ಮುಖಭಂಗ ಅನುಭವಿಸುತ್ತಿರುವ ಚೆನ್ನೈಗೆ ಮತ್ತೊಂದು ಆಘಾತ ಕೇಳಿ ಬಂದಿದೆ. ಆಲ್ ರೌಂಡರ್ ಡ್ವೇನ್ ಬ್ರಾವೋ ಕೋಡ ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

IPL 2020: Ravindra Jadeja posts inspiring message on Instagram

ಆಡಿರುವ 10 ಪಂದ್ಯಗಳಲ್ಲಿ 3ನೇ ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ -0.463 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ತಳ ಸೇರಿದೆ. ಇದು ಚೆನ್ನೈ ಅಭಿಮಾನಿಗಳಿಗೆ, ಫ್ರಾಂಚೈಸಿಗೆ ಮತ್ತು ಆಟಗಾರರಿಗೂ ಬೇಸರ ತಂದಿದೆ. ಆದರೆ ರವೀಂದ್ರ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಮೆಸೇಜ್ ಹಾಕಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಜಡೇಜಾ, 'ನಾವು ಗೆಲ್ಲಬಲ್ಲೆವು, ನಾವು ಗೆಲ್ಲಲೇಬೇಕು, ನಾವು ಗೆಲ್ಲುತ್ತೇವೆ,' ಎಂದು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Story first published: Thursday, October 22, 2020, 10:15 [IST]
Other articles published on Oct 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+