ಐಪಿಎಲ್ 2020: ಹಸಿರು ಜರ್ಸಿಯಲ್ಲಿ ಆರ್‌ಸಿಬಿಗೆ ಗೆಲುವಿಗಿಂತ ಸೋಲೇ ಹೆಚ್ಚು!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಹೀನಾಯವಾಗಿ ಕಳೆದುಕೊಂಡಿದೆ. ಆರ್‌ಸಿಬಿ ನೀಡಿದ್ದ 146 ರನ್‌ಗಳ ಸುಲಭ ಸವಾಲನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ಹಸಿರು ಬಣ್ಣದ ಜರ್ಸಿಯಲ್ಲಿ ಕಣಕ್ಕಿಳಿದ ಆರ್‌ಸಿಬಿ ಈ ಬಣ್ಣದಲ್ಲಿನ ಕೆಟ್ಟ ಪ್ರದರ್ಶನ ಈ ಬಾರಿಯೂ ಮುಂದುವರಿಸಿದೆ.
ಹೌದು, ಆರ್‌ಸಿಬಿ ಪ್ರತೀ ವರ್ಷವೂ ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲವನ್ನು ನೀಡುವ ನಿಟ್ಟಿನ ಒಂದು ಪಂದ್ಯದಲ್ಲಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. 2011ರ ಆವೃತ್ತಿಯಿಂದ ಈ ಪರಂಪರೆಯನ್ನು ನಡೆಸಿಕೊಂಡು ಬಂದಿದೆ ಆರ್‌ಸಿಬಿ. ಕಾಕತಾಳೀಯವೇನೆಂದರೆ ಈ ಪಂದ್ಯಗಳ ಇತಿಹಾಸ ಮಾತ್ರ ಆರ್‌ಸಿಬಿ ಪಾಲಿಗೆ ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹಸಿರು ಜರ್ಸಿಯಲ್ಲಿ ಅದೃಷ್ಠವಿಲ್ಲ
ಕಳೆದ ಇಪ್ಪತ್ತು ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಆದರೆ ಈ ಬಾರಿಯ ಆವೃತ್ತಿಯ ಚೆನ್ನೈ ವಿರುದ್ಧದ ಪಂದ್ಯವೂ ಸೇರಿದಂತೆ 8 ಆವೃತ್ತಿಗಳಲ್ಲಿ ಆರ್‌ಸಿಬಿ ಸೋಲನ್ನೇ ತನ್ನದಾಗಿಸಿಕೊಂಡಿದೆ. ಗೆದ್ದಿರುವುದು ಎರಡು ಆವೃತ್ತಿಗಳಲ್ಲಿ ಮಾತ್ರ. ಹೀಗಾಗಿ ಆರ್‌ಸಿಬಿಗೆ ಹಸಿರು ಜರ್ಸಿ ಅದೃಷ್ಠವಿಲ್ಲ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಗೆದ್ದ ಎರಡು ಬಾರಿ ಫೈನಲ್ ಪ್ರವೇಶ
ಮತ್ತೊಂದು ಕುತೂಹಲಕಾರಿ ಸಂಗತಿ ಈ ಅಂಕಿಅಂಶಗಳಲ್ಲಿ ಇದೆ. ಆರ್‌ಸಿಬಿ ಈ ಹಸಿರು ಜರ್ಸಿಯಲ್ಲಿ ಗೆದ್ದಿರುವುದು 2011ರ ಆವೃತ್ತಿ ಹಾಗೂ 2016ರ ಆವೃತ್ತಿಯಲ್ಲಿ ಮಾತ್ರ. ಕಾಕತಾಳೀಯವೆಂಬಂತೆ ಈ ಎರಡೂ ಆವೃತ್ತಿಗಳಲ್ಲಿ ಆರ್‌ಸಿಬಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿತ್ತು. ಅದಕ್ಕೂ ಮುನ್ನ 2009ರಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು.

ಸೋಲಿನೊಂದಿಗೆ ಸಣ್ಣ ಹಿನ್ನೆಡೆ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಚೆನ್ನೈ ವಿರುದ್ದದ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆರುವ ಅವಕಾಶ ಆರ್‌ಸಿಬಿಯ ಮುಂದಿತ್ತು. ಆದರೆ ಈ ಸೋಲಿನ ಮೂಲಕ ಸಣ್ಣ ಹಿನ್ನಡೆಗೆ ಒಳಗಾಗಿದೆ ಆರ್‌ಸಿಬಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications