ಐಪಿಎಲ್ 2020: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಭಾರೀ ದಂಡ!

ದುಬೈ: ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಪಂದ್ಯದಲ್ಲಿ 12 ಲಕ್ಷ ರೂ.ಗಳ ಭಾರೀ ದಂಡ ವಿಧಿಸಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸ್ಲೋ ಓವರ್ ನಡೆಸಿದ್ದಕ್ಕಾಗಿ ದೊಡ್ಡ ಮೌಲ್ಯದ ದಂಡ ತೆರಬೇಕಾಗಿ ಬಂದಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 24) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಕೊಹ್ಲಿ ಬಹಳಷ್ಟು ತಪ್ಪುಗಳನ್ನು ಮಾಡಿದ್ದರು. ಮುಖ್ಯವಾಗಿ 2 ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರು.
ಕೆXIಪಿ ನಾಯಕ ಕೆಎಲ್ ರಾಹುಲ್ ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದೆ ಕೊಹ್ಲಿಯ ದೊಡ್ಡ ಪ್ರಮಾದವಾಯಿತು. ಜೀವ ದಾನ ಪಡೆದ ರಾಹುಲ್ ಪಂದ್ಯ ಗೆಲುವಿನ ಆಟ ನೀಡಿದ್ದರು. ಸ್ಫೋಟಕ ಶತಕವೂ ಬಾರಿಸಿದ್ದರು. ಪರಿಣಾಮವಾಗಿ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಭರ್ಜರಿ 97 ರನ್‌ಗಳ ಜಯ ದಾಖಲಿಸಿತ್ತು.
ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಆರ್‌ಸಿಬಿ ಹುಮ್ಮಸ್ಸಿನಲ್ಲಿತ್ತು. ಆದರೆ ಟೂರ್ನಿಯ ಎರಡನೇ ಪಂದ್ಯವನ್ನು ಹೀನಾಯವಾಗಿ ಸೋತು ಕೊಹ್ಲಿ ಪಡೆಯೀಗ ಮಂಕಾಗಿದೆ (ಟಿ20ಯಯಲ್ಲಿ ಸ್ಲೋ ಓವರ್ ಅಂದರೇನು? ಮಾಹಿತಿ ಕೆಳಗಿದೆ ನೋಡಿ)

ರಾಹುಲ್ ಅಬ್ಬರದಾಟ
ಕಿಂಗ್ಸ್ ಇಲೆವೆನ್ ಪಂಜಾಬ್‌ನ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್ ಮೂಲಕ ರನ್ ಬಲ ತುಂಬಿದರು. ಇನ್ನು ಬೌಲಿಂಗ್ ವಿಭಾಗದಲ್ಲಿ ರವಿ ಬಿಶ್ನೋಯ್ (3 ವಿಕೆಟ್), ಮುರುಗನ್ ಅಶ್ವಿನ್ (3 ವಿಕೆಟ್) ಮತ್ತು ಶೆಲ್ಡನ್ ಕಾಟ್ರೆಲ್ (2 ವಿಕೆಟ್) ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.

ಕನ್ನಡಿಗನಿಂದ 7 ಸಿಕ್ಸರ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ಕೆಎಲ್ ರಾಹುಲ್ ಅಜೇಯ 132 (69 ಎಸೆತ), ಮಯಾಂಕ್ ಅಗರ್ವಾಲ್ 26, ನಿಕೋಲಸ್ ಪೂರನ್ 17, ಕರುಣ್ ನಾಯರ್ ಅಜೇಯ 15 ರನ್ ಸೇರಿಸಿದರು. ಕೆXIಪಿ 20 ಓವರ್‌ಗೆ 3 ವಿಕೆಟ್ ಕಳೆದು 206 ರನ್ ಗಳಿಸಿತು. ಈ ವೇಳೆ ರಾಹುಲ್ ಬ್ಯಾಟಿಂದ 7 ಸಿಕ್ಸರ್‌ಗಳು ಸಿಡಿದಿದ್ದವು.

ಆರ್‌ಸಿಬಿ ನೀರಸ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದು ಆಘಾತ ಅನುಭವಿಸಿತು. ವಿರಾಟ್ ಕೊಹ್ಲಿ 1, ದೇವದತ್ ಪಡಿಕ್ಕಲ್ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಆ್ಯರನ್ ಫಿಂಚ್ 20, ಎಬಿ ಡಿ ವಿಲಿಯರ್ಸ್ 28, ವಾಷಿಂಗ್ಟನ್ ಸುಂದರ್ 30, ಶಿವಂ ದೂಬೆ 12 ರನ್‌ನೊಂದಿಗೆ 17 ಓವರ್‌ಗೆ ಎಲ್ಲಾ ವಿಕೆಟ್ ಕಳೆದು ಆರ್‌ಸಿಬಿ 109 ರನ್ ಗಳಿಸಿ ಸೋಲನುಭವಿಸಿತು.

ಟಿ20ಯಲ್ಲಿ ಸ್ಲೋ ಓವರ್
ಪಂದ್ಯದ ಸೋಲಿನ ಜೊತೆಗೆ ಕೊಹ್ಲಿ ಪಡೆಗೆ ಫೈನ್ ಬರೆಯೂ ಬಿದ್ದಿದೆ. ಆರ್‌ಸಿಬಿಯ ಕನಿಷ್ಠ ಓವರ್ ದರದ ತಪ್ಪಿಗಾಗಿ ಐಪಿಎಲ್ 12 ಲಕ್ಷ ರೂ.ಗಳ ದಂಡ ವಿಧಿಸಿದೆ. ಟಿ20 ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್ ಬ್ರೇಕ್ ಸೇರಿಸಿ 75 ನಿಮಿಷಗಳ ಕಾಲಾವಕಾಶ ಇರುತ್ತದೆ. ಈ ಕಾಲಾವಧಿಯೊಳಗೆ 20 ಓವರ್‌ಗಳನ್ನು ಮುಗಿಸಬೇಕಿರುತ್ತದೆ. ತಪ್ಪಿದರೆ ಅದು ಸ್ಲೋ ಓವರ್ ಅನ್ನಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications