For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸ್ಟಾರ್ ಆಲ್‌ರೌಂಡರ್ ಲಭ್ಯತೆ ಬಗ್ಗೆ ಆರ್‌ಸಿಬಿ ನಾಯಕ ಕೊಹ್ಲಿಯಿಂದ ಅಪ್‌ಡೇಟ್

IPL 2020: RCB captain Virat Kohli gives update on Chris Morris availability

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈ ಬಾರಿಯ ಐಪಿಎಲ್‌ನ ಆರಂಭದಿಂದಲ್ಲೇ ಒಂದು ಹಿನ್ನಡೆಗೆ ಒಳಗಾಯಿತು. ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಕ್ರಿಸ್ ಮೋರಿಸ್ ಟೂರ್ನಿಯ ಆರಂಭಕ್ಕೂ ಮುನ್ನವೇ ಗಾಯಗೊಂಡರು. ಹೀಗಾಗಿ ಈವರೆಗೂ ಒಂದೇ ಒಂದು ಪಂದ್ಯದಲ್ಲಿ ಕ್ರಿಸ್ ಮೋರಿಸ್ ಆಡಲು ಕಣಕ್ಕಿಳಿದಿಲ್ಲ. ಸ್ಟಾರ್ ಆಲ್‌ರೌಂಡರ್‌ನ ಅಲಭ್ಯತೆಯ ಮಧ್ಯೆಯೂ ಆರ್‌ಸಿಬಿ ಕೆಲ ಆಡಿದ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದೆ.

ಐಪಿಎಲ್ ಆರಂಭವಾಗಿ ಈಗ ಎರಡು ವಾರಗಳು ಪೂರ್ಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸೋಲು ಕಂಡ ಬಳಿಕ ಕ್ರಿಸ್ ಮೋರಿಸ್ ಯಾವಾಗ ಲಭ್ಯವಾಗಲಿದ್ದಾರೆ ಎಂಬ ಬಗ್ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಕೊಹ್ಲಿ ನೇರ ಉತ್ತರವನ್ನು ನೀಡಿದ್ದಾರೆ.

ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಬಹುತೇಕ ಸಮೀಪದಲ್ಲಿ ಕ್ರಿಸ್ ಮೋರಿಸ್ ಇದ್ದರು. ಆದರೆ ಸ್ವಲ್ಪದರಲ್ಲೇ ಅವರು ಈ ಅವಕಾಶವನ್ನು ಕಳೆದುಕೊಂಡರು ಎಂಬ ವಿಚಾರವನ್ನು ವಿರಾಟ್ ಕೊಹ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಹೇಳಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಕ್ರಿಸ್ ಮೋರಿಸ್ ಆಗಮನ ಸಾಕಷ್ಟು ಸಮತೋಲನವನ್ನು ತರಲಿದೆ ಎಂಬ ವಿಚಾರವನ್ನು ಅವರು ಹೇಳಿದ್ದಾರೆ. "ಮುಂದಿನ ಪಂದ್ಯಕ್ಕೂ ಮುನ್ನ ನಾವು ನಾಲ್ಕು ದಿನಗಳ ಕಾಲಾವಕಾಶವನ್ನು ಹೊಂದಿದ್ದೇವೆ. ಅವರು ತಂಡದಲ್ಲಿ ಅವಕಾಶವನ್ನು ಪಡೆದರೆ ವಿಶೇಷ ಸಮತೋಲನ ತಂಡದಲ್ಲಿ ಉಂಟಾಗಲಿದೆ" ಎಂದು ಕೊಹ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುಭವಿ ಆಲ್‌ರೌಂಡರ್ ಆಗಿರುವ ಕ್ರಿಸ್ ಮೋರಿಸ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಸ್ಪೋಟಕ ಬ್ಯಾಟಿಂಗ್ ಮಾಡಬಲ್ಲ ಮೊರಿಸ್ ತಂಡಕ್ಕೆ ಅನಿವಾರ್ಯ ಸಂದರ್ಭದಲ್ಲಿ ರನ್‌ರೇಟ್ ಹೆಚ್ಚಿಸಲು ನೆರವಾಗಲಿದ್ದಾರೆ. ಹೀಗಾಗಿ ಕ್ರಿಸ್ ಮೋರಿಸ್ ಆಗಮನದ ಬಗ್ಗೆ ತಂಡದಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಮುಂದಿನ ಪಂದ್ಯ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ನಡೆಯಲಿದ್ದು ಈ ಪಂದ್ಯದಲ್ಲಿ ಕ್ರಿಸ್ ಮೋರಿಸ್ ಆಡುವ ಸಾಧ್ಯತೆ ಹೆಚ್ಚಿದೆ.

Story first published: Wednesday, October 7, 2020, 10:03 [IST]
Other articles published on Oct 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+