Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ವಾಶಿಂಗ್ಟನ್ ಸುಂದರ್ ಬಗ್ಗೆ ಕೋಚ್ ಸೈಮನ್ ಕ್ಯಾಟಿಚ್ ಭರವಸೆಯ ಮಾತು

IPL 2020: RCB coach says Washington Sundar has the potential to become a genuine all-rounder

ಆರ್‌ಸಿಬಿ ತಂಡದ ಆಲ್‌ರೌಂಡರ್ ಆಗಿರುವ ವಾಶಿಂಗ್ಟನ್ ಸುಂದರ್ ಈ ಬಾರಿಯ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಚುವಲ್ಲಿ ವಿಫಲರಾಗಿದ್ದಾರೆ. ಆದರೆ ಸುಂದರ್ ಬೌಲಿಂಗ್ ಎದುರಾಳಿಯನ್ನು ಕಂಗೆಡಿಸಿರುವುದು ಸುಳ್ಳಲ್ಲ. ಆದರೆ ಸುಂದರ್ ಬಗ್ಗೆ ಆರ್‌ಸಿಬಿ ತಂಡದ ಕೋಚ್ ಸೈಮನ್ ಕ್ಯಾಟಿಚ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಮಾತನಾಡಿದರು. ಯುವ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಯಾವ ರೀತಿಯಾಗಿ ಮಹತ್ವದ ಪಾತ್ರವನ್ನು ವಹಿಸಿದರು ಎಮಬ ಸಂಗತಿಯನ್ನು ಕ್ಯಾಟಿಚ್ ಹಂಚಿಕೊಂಡಿದ್ದಾರೆ.

"ವಾಶಿಂಗ್ಟನ್ ಸುಂದರ್ ನಮ್ಮ ತಮಡದಲ್ಲಿ ಕೆಲ ವರ್ಷಗಳಿಂದ ಇದ್ದಾರೆ. ಆದರೆ ಅವರಿನ್ನೂ ಯುವ ಆಟಗಾರನಾಗಿದ್ದಾರೆ. ತಮಡದ ಪರವಾಗಿ ಅವರ ಪ್ರದರ್ಶನ ಅದರಲ್ಲೂ ವಿಶೇಷವಾಗಿ ಪವರ್‌ಪ್ಲೇನಲಲ್ಲಿ ಬೌಲಿಂಗ್‌ನಲ್ಲಿ ಸುಂದರ್ ಗಳಿಸಿದ ಯಶಸ್ಸು ನಿಜಕ್ಕೂ ಶ್ರೇಷ್ಠವಾದದ್ದು" ಎಂದಿದ್ದಾರೆ ಸೈಮನ್ ಕ್ಯಾಟಿಚ್.

"ಅವರು ಬ್ಯಾಟಿಂಗ್‌ನಲ್ಲಿ ಕೆಲವು ಅವಕಾಶಗಳನ್ನು ಪಡೆದಿದ್ದಾರೆ. ಸಮಯಕ್ಕೆ ಸರಿಯಾಗಿ ಅವರು ಖಂಡಿತವಾಗಿಯೂ ಉತ್ತಮವಾದ ಆಲ್‌ರೌಂಡರ್ ಆಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆತ ಅಗ್ರ 6 ರಲ್ಲಿ ಬ್ಯಾಟಿಂಗ್ ಮಾಡಬಹುದು ಮತ್ತು ಬ್ಯಾಟಿಂಗ್ ಪ್ರದರ್ಶನದ ಮೂಲಕವೂ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ವಾರ್ನರ್ ಹೇಳಿದ್ದಾರೆ.

ವಾಶಿಂಗ್ಟನ್ ಸುಂದರ್ ಈ ಬಾರಿಯ ಐಪಿಎಲ್‌ 14 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಆದರೆ ಸುಂದರ್ ಟೂರ್ನಿಯ ಎಕನಾಮಿಕಲ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 48 ಓವರ್‌ಗಳನ್ನು ಎಸೆದಿರುವ ಸುಂದರ್ 5.77 ಸರಾಸರಿಯಲ್ಲಷ್ಟೇ ರನ್ ಬಿಟ್ಟುಕೊಟ್ಟು ಎದುರಾಳಿಗಳಿಗೆ ಕಂಟಕವಾಗಿದ್ದಾರೆ.

Story first published: Friday, November 6, 2020, 19:29 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+