Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌: RCB ಜೊತೆ ಮ್ಯಾಕ್ಸ್‌ ಜೀವ ವಿಮೆಯ ಪಾಲುದಾರಿಕೆ

IPL 2020: RCB gets Max Life Insurance partnership

ಬೆಂಗಳೂರು, ಆಗಸ್ಟ್ 30 : ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ 20 ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನೊಂದಿಗೆ ಅಧಿಕೃತ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಮ್ಯಾಕ್ಸ್ ಲೈಫ್ ಎರಡನೇ ವರ್ಷಗಳ ಅವಧಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಜೀವ ವಿಮಾ ಪಾಲುದಾರರಾಗಲಿದೆ. ತಂಡದ ಅಧಿಕೃತ ಜೀವ ವಿಮಾ ಪಾಲುದಾರರಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ಟಿ 20 ಯ 13ನೇ ಆವೃತ್ತಿಯ ಆರ್‌ಸಿಬಿಯ ಸಮವಸ್ತ್ರದ ಪಾಲುದಾರರೂ ಕೂಡ ಆಗಿದ್ದಾರೆ.

ಸಮಗ್ರ ಕ್ರಿಕೆಟ್ ಗೇರ್ ಆಟಗಾರರನ್ನು ದೈಹಿಕ ಅಪಾಯಗಳು ಮತ್ತು ಗಾಯಗಳಿಂದ ತಡೆಯುವಂತೆ, ಜೀವ ವಿಮೆಯ ರೂಪದಲ್ಲಿ ಕೂಡ ರಕ್ಷಣಾತ್ಮಕ ಗೇರ್ ಅಗತ್ಯವಿರುತ್ತದೆ. ಇದು ಹಣಕಾಸಿನ ಅನಿಶ್ಚಿತತೆಯಿಂದ ಕೂಡ ರಕ್ಷಿಸುತ್ತದೆ.

ಈ ಸಹಭಾಗಿತ್ವವು ಆರ್‌ಸಿಬಿ ಕ್ರಿಕೆಟಿಗರಿಗೆ 'ಪ್ರೊಟೆಕ್ಷನ್ ಆನ್ ದಿ ಫ್ರಂಟ್ ಫೂಟ್' (ಮುಂದಿನ ಪಾದದ ರಕ್ಷಣೆ) ನೊಂದಿಗೆ ಆಡಲು ಪ್ರೇರಣೆ ನೀಡುವುದಲ್ಲದೆ, ಇತರ ಅಭಿಮಾನಿಗಳಿಗೆ ಜೀವ ವಿಮೆಯನ್ನು ಹೊಂದಲು ಪ್ರೋತ್ಸಾಹಿಸುತ್ತದೆ. ಕಂಪನಿಯ ನಂಬಿಕೆಯಾದ 'ಯು ಆರ್ ದಿ ಡಿಫರೆನ್ಸ್' (ನೀನೇ ಬದಲಾವಣೆ) ಸಿದ್ಧಾಂತವನ್ನು ಈ ಸಂಘವು ಅನುಸರಿಸುತ್ತದೆ. ಒಬ್ಬ ವ್ಯಕ್ತಿಯಾಗಿ, 'ನೀವು', ನಿಮ್ಮ ಪ್ರೀತಿಪಾತ್ರರ ಜೀವನದ ಕಷ್ಟಗಳಿಂದ ನೆರವಾಗುತ್ತೀರಿ.

ಪಾಲುದಾರಿಕೆಯ ಕುರಿತು ಮಾತನಾಡಿದ ಮ್ಯಾಕ್ಸ್ ಲೈಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರಶಾಂತ್ ತ್ರಿಪಾಠಿ, ''ಅವಧಿಯ ವಿಮೆ ಆರ್ಥಿಕ ರಕ್ಷಣೆಯ ಅತ್ಯಂತ ಮೂಲಭೂತ ಸೌಕರ್ಯವಾಗಿದೆ. ಭಾರತ ಯುವ ದೇಶವಾಗಿದ್ದು, ಯುವಜನರೊಂದಿಗೆ ಸಂಪರ್ಕ ಸಾಧಿಸಲು ಟಿ 20 ಉತ್ತಮ ವೇದಿಕೆ ಕಲ್ಪಿಸುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಸತತ ಎರಡನೇ ವರ್ಷವೂ ಅವರ ಅಧಿಕೃತ ಜೀವ ವಿಮಾ ಪಾಲುದಾರರಾಗಿ ಪಾಲುದಾರರಾಗಲು ನಮಗೆ ಸಂತೋಷವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!

ನಮ್ಮ ಪಾಲುದಾರಿಕೆಯ ಮೂಲಕ, ಉತ್ತಮ ಆರ್ಥಿಕ ರಕ್ಷಣೆಯ ಸಂದೇಶದೊಂದಿಗೆ ತಂಡದ ವೈವಿಧ್ಉಮಯ ಮತ್ತು ಕ್ರಿಯಾತ್ಮಕ ಯುವ ಪ್ರೇಕ್ಷಕರ ನೆಲೆಯನ್ನು ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಪಾಲುದಾರಿಕೆಯೊಂದಿಗೆ, ಜೀವನದ ಅನಿಶ್ಚಿತತೆಗಳ ವಿರುದ್ಧ ಆರ್ಥಿಕ ರಕ್ಷಣೆಯ ಅತ್ಯಂತ ವ್ಯಾಪಕವಾದ ಸ್ವರೂಪವನ್ನು ಸ್ವೀಕರಿಸಲು ಜೀವ ವಿಮೆ ಮತ್ತು ಮುಖ್ಯವಾಗಿ ಟರ್ಮ್ ಇನ್ಶುರೆನ್ಸ್ ಅನ್ನು ಪರಿಗಣಿಸಲು ಯುವಕರನ್ನು ಪ್ರೋತ್ಸಾಹಿಸುವ ಬಯಕೆ ಹೊಂದಿದ್ದೇವೆ'' ಎಂದರು.

ಪಾಲುದಾರಿಕೆಯ ಕುರಿತು ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧ್ಯಕ್ಷ ಸಂಜೀವ್ ಚುರಿವಾಲಾ, ''ಆಟಗಾರರ ರಕ್ಷಣೆಯ ಜೊತೆಗೆ, ಆರ್ಥಿಕ ಅಭಿವ್ಯಕ್ತಿ ಎಂದರೆ ಸಮಾನ ಚಿಂತನೆ ಕೂಡ ಮಾಡಬೇಕಿದೆ. ಈ ಸಹಭಾಗಿತ್ವವು ಇಂದಿನ ಜಗತ್ತಿನಲ್ಲಿ ಆರ್ಥಿಕ ರಕ್ಷಣೆಯ ಮಹತ್ವದ ಸಂದೇಶವನ್ನು ನೀಡುವ ಗುರಿಯನ್ನು ಹೊಂದಿದೆ'' ಎಂದು ಹೇಳಿದರು.

Story first published: Wednesday, September 30, 2020, 1:03 [IST]
Other articles published on Sep 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+