Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈಗ ಕೊಹ್ಲಿ ನಂಬಿಕೆಯಿಡಬಲ್ಲ ಬೌಲಿಂಗ್ ವಿಭಾಗ ಆರ್‌ಸಿಬಿ ತಂಡದಲ್ಲಿದೆ: ಸ್ಕಾಟ್ ಸ್ಟೈರಿಸ್

IPL 2020: RCB have a bowling unit that Kohli has belief in: Scott Styris

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಕೆಲ ಪಂದ್ಯಗಳನ್ನು ಹೊರತುಪಡಿಸಿದರೆ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿರುವಂತಿದೆ. ತಂಡದಲ್ಲಿ ಮಾಡಿಕೊಂಡಿರುವ ಕೆಲ ಬದಲಾವಣೆಗಳು ಇದಕ್ಕೆ ಕಾರಣವೆನಿಸಿದೆ. ಆರ್‌ಸಿಬಿ ತಂಡದ ಈಗನ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ನಾಯಕನ ನಿರೀಕ್ಷೆಯಂತಿದೆ. ನಾಯಕ ಯಾವ ರಿತಿಯ ಎಸೆತಗಳನ್ನು ನಿರೀಕ್ಷೆ ಮಾಡುತ್ತಾನೋ ಆ ರೀತಿಯ ಎಸೆತಗಳನ್ನು ಎಸೆಯಲು ಸಮರ್ಥರಾಗಿದ್ದಾರೆ. ಇದು ತಂಡದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ ಎಂದು ಸ್ಕಾಟ್ ಸ್ಟೈರಿಸ್ ಅಭಿಪ್ರಾಯ ಪಟ್ಟಿದ್ದಾರೆ.

"ನಾನು ಯಾವಾಗಲೂ ನಂಬಿಕೊಂಡಿರುವುದು ಬೌಲರ್‌ ನಾಯಕನ ನಂಬಿಕೆಯನ್ನು ಗಳಿಸಿಕೊಂಡಿರಬೇಕು. ಆರ್‌ಸಿಬಿ ತಂಡವನ್ನು ಗಮನಿಸಿದಾಗ ಕಡೆಗೂ ನಾಯಕ ತಾನು ಬಯಸಿದ ರೀತಿಯ ಎಸೆತಗಳನ್ನು ಎಸೆಯಬಲ್ಲ ಬೌಲಿಂಗ್ ವಿಭಾಗವನ್ನು ಹೊಂದಿದಂತೆ ಕಂಡುಬರುತ್ತಿದೆ" ಎಂದು ಸ್ಟಾರ್ ಸ್ಟಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇನ್ನು ಸ್ಟೈರಿಸ್ ಹೆಳಿದ ಮಾತಿಗೆ ಆಸಿಸ್ ವೇಗಿ ಬ್ರೇಟ್ ಲಿ ಕೂಡ ಧ್ವನಿಗೂಡಿಸಿದ್ದಾರೆ. "ನೀವು ಹೆಳಿದ್ದು ನಿಜ, ಅದು ಈಗ ನಂಬಿಕೆಯನ್ನು ಗಳಿಸಿಕೊಂಡಿದೆ. ಬೌಲರ್ ಆಗಿ ನಿಮ್ಮನ್ನು ನಾಯಕ ಎಂತಾ ಸಂದರ್ಭದಲ್ಲಿ ಬಳಸಿಕೊಳ್ಳುವ ನಂಬಿಕೆಯನ್ನು ಹೊಂಗಿರಬೇಕು" ಎಂದು ಬ್ರೆಟ್ ಲೀ ಹೇಳಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಅನುಭವಿ ಕ್ರಿಸ್ ಮೋರಿಸ್ ಆಗಮನದ ನಂತರ ಬೌಲಿಂಗ್ ವಿಭಾಗ ಹೊಸ ಉತ್ಸಾಹದಲ್ಲಿದೆ. ಕಳೆದ ಪಂದ್ಯದಲ್ಲಿ ಸಿರಾಜ್ ಉತ್ತಮ ಪ್ರದರ್ಶನವನ್ನು ನೀಡಿದ್ದರೆ ಸ್ಪಿನ್ ಬೌಲರ್‌ಗಳಾದ ಚಾಹಲ್ ಹಾಗೂ ಸುಂದರ್ ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

Story first published: Saturday, October 24, 2020, 17:17 [IST]
Other articles published on Oct 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+