Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್2020: ಆರ್‌ಸಿಬಿ ಆಂತರಿಕ ಪಂದ್ಯದಲ್ಲಿ ವಿರಾಟ್ ಪಡೆಯನ್ನು ಮಣಿಸಿದ ಚಾಹಲ್ ಬಳಗ

Ipl 2020: Rcb Intra-squad Practice Match Chahal Team Beats Team Kohli

ಐಪಿಎಲ್ ಆರಂಭಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಅಭ್ಯಾಸವನ್ನು ನಡೆಸುತ್ತಿರುವ ಆರ್‌ಸಿಬಿ ತಂಡ ಆಂತರಿಕ ಪಂದ್ಯವನ್ನಾಡುವ ಮೂಲಕ ಟೂರ್ನಿಗೆ ಸಿದ್ಧವಾಗುತ್ತಿದೆ. ಒಂದು ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದರೆ ಇನ್ನೊಂದು ತಂಡದ ನಾಯಕತ್ವವಹಿಸಿಕೊಂಡಿದ್ದು ಸ್ಪಿನ್ನರ್ ಯುಜುವೇಂದ್ರ ಚಾಹಲ್. ಈ ಪಂದ್ಯದಲ್ಲಿ ಕೊಹ್ಲಿ ಪಡೆ ಚಾಹಲ್ ತಂಡಕ್ಕೆ ಶರಣಾಯಿತು.

ಎಲ್ಲಾ ವಿಭಾಗಗಳನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಸಮಾನವಾಗಿ ವಿಂಗಡಿಸಿ ಆಂತರಿಕ ಪಂದ್ಯಕ್ಕೆ ಎರಡು ತಂಡಗಳನ್ನು ಸಿದ್ಧಪಡಿಸಲಾಯಿತು ಎಂದು ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದರು. ಎಡಗೈ ಬಲಗೈ ಕಾಂಬಿನೆಶನ್, ಸ್ಪಿನ್ ಬೌಲರ್‌ಗಳು ಎಲ್ಲವನ್ನೂ ಗಮನಿಸಿಕೊಂಡು ತಂಡವನ್ನು ರಚಿಸಲಾಗಿದೆ ಎಂದು ಮೈಕ್ ಹೆಸ್ಸನ್ ಮಾಹಿತಿ ನೀಡಿದರು.

ತಂಡ ಹಾಗೂ ಪ್ರಮುಖ ಆಟಗಾರರು

ತಂಡ ಹಾಗೂ ಪ್ರಮುಖ ಆಟಗಾರರು

ಚಾಹಲ್ ನೇತೃತ್ವದ ತಂಡದಲ್ಲಿ ಎಬಿ ಡಿವಿಲಿಯರ್ಸ್ ಜೊತೆಗೆ ದೇವ್‌ದತ್ ಪಡಿಕ್ಕಲ್, ಉಮೇಶ್ ಯಾದವ್ ಹಾಗೂ ನವ್‌ದೀಪ್ ಸೈನಿ ಮುಖ್ಯ ಆಟಗಾರರಾಗಿದ್ದರೆ, ಕೊಹ್ಲಿ ಬಳಗದಲ್ಲಿ ಇಸುರು ಉದಾನ, ಕ್ರಿಸ್ ಮೋರಿಸ್, ಪಾರ್ಥೀವ್ ಪಟೇಲ್ ಹಾಗೂ ಮೊಹಮದ್ ಸಿರಾಜ್ ಇದ್ದರು.

ಕೊಹ್ಲಿ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿದ ಚಾಹಲ್ ತಂಡ

ಕೊಹ್ಲಿ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿದ ಚಾಹಲ್ ತಂಡ

ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 43 ರನ್ ಗಳಿಸಿ ಟೀಮ್ ಚಹಲ್ ಪರವಾಗಿ ಉತ್ತಮ ಪ್ರದರ್ಶನ ನೀಡಿದರು. ಎಬಿಡಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ಕೂಡ ಉತ್ತಮ ಆಟ ಪ್ರದರ್ಶಿಸಿದರು. ಟೀಮ್ ಕೊಹ್ಲಿಯ ಭಾಗವಾಗಿದ್ದ ವಾಷಿಂಗ್ಟನ್ ಸುಂದರ್ ಕೇವಲ 11 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಚಾಹಲ್ ಪಡೆ ಸ್ಪರ್ಧಾತ್ಮಕ ಗುರಿಯನ್ನು ಕೊಹ್ಲಿ ಪಡೆಗೆ ನೀಡಿತು.

ಗೆಲುವು ಸಾಧಿಸಿದ ಚಾಹಲ್ ಬಳಗ

ಗೆಲುವು ಸಾಧಿಸಿದ ಚಾಹಲ್ ಬಳಗ

ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಪಾರ್ಥಿವ್ ಪಟೇಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. 2020 ರ ಹರಾಜಿನಲ್ಲಿ 10 ಕೋಟಿ ರೂ.ಗೆ ಖರೀದಿಸಿದ ಕ್ರಿಸ್ ಮೋರಿಸ್ ಈ ಇನ್ನಿಂಗ್ಸ್‌ನ ನಂತರದ ಹಂತದಲ್ಲಿ ಕೆಲವು ಅದ್ಭುತ ಹೊಡೆತಗಳನ್ನು ಬಾರಿಸಿದರು. 13 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದ ಶಹಬಾಜ್ ಅಹ್ಮದ್ ಚಾಹಲ್ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದರು.

ಮೊದಲ ಪಂದ್ಯಕ್ಕೆ ಆರ್‌ಸಿಬಿ ರೆಡಿ

ಮೊದಲ ಪಂದ್ಯಕ್ಕೆ ಆರ್‌ಸಿಬಿ ರೆಡಿ

ಐಪಿಎಲ್ ಟೂರ್ನಿ ಶನಿವಾರದಿಂದ ಆರಂಭವಾಗಲಿದೆ. ಆರ್‌ಸಿಬಿ ತಂಡದ ಮೊದಲ ಪಂದ್ಯ ಸೋಮವಾರದಂದು ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತನ್ನ ಮೊದಲ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಈ ಆಂತರಿಕ ಪಂದ್ಯವನ್ನಾಡುವ ಮೂಲಕ ಭರ್ಜರಿ ಸಿದ್ಧತೆ ಮಾಡಿಕೊಳ್ಳತೊಡಗಿದೆ

Story first published: Thursday, September 17, 2020, 21:22 [IST]
Other articles published on Sep 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+