ಯಜುವೇಂದ್ರ ಚಾಹಲ್ 'ಕನ್ನಡ ಟ್ವೀಟ್' ನಲ್ಲಿ ಏನು ಬರೆದುಕೊಂಡಿದ್ದಾರೆ, ಗೊತ್ತಾ?

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) ಹದಿಮೂರನೇ ಆವೃತ್ತಿ ಮಾರ್ಚ್ 29ರಿಂದ ಆರಂಭವಾಗಲಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಒಂದು ಬಾರಿಯೂ ಕಪ್ ಗೆಲ್ಲದ ತಂಡವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರು (ಆರ್‌ಸಿಬಿ) ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಆರ್‌ಸಿಬಿ ಯ ತರಬೇತಿ ಶಿಬಿರ ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ತಂಡದ ನಿರ್ದೇಶಕ ಮೈಕ್ ಹೆಸನ್ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಯಜುವೇಂದ್ರ ಚಾಹಲ್, ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ, ಕನ್ನಡಿಗರ ಗಮನ ಸೆಳೆದಿದ್ದಾರೆ. ಚಾಹಲ್ ಮಾಡಿದ ಟ್ವೀಟಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆರ್‌ಸಿಬಿ ಪ್ರಮುಖ ಆಟಗಾರರು
2020ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ತಂದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ) ಇಸುರು ಉದಾನಾ (ಶ್ರೀಲಂಕಾ), ಜೋಶುವಾ ಫಿಲಿಪ್ (ಆಸೀಸ್) ಮುಂತಾದ ಪ್ರಮುಖ ಆಟಗಾರರನ್ನು ಖರೀದಿಸಿತ್ತು.
"ನಮ್ಮ ಬೆಂಗಳೂರು ಕುಟುಂಬ ರೆಡೀ ನಾ?
ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಮತ್ತು ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿರುವ ಯಜುವೇಂದ್ರ ಚಾಹಲ್, ಒಂದೇ ಸಾಲಿನ ಟ್ವೀಟ್ ಅನ್ನು ಮಾಡಿದ್ದಾರೆ. "ನಮ್ಮ ಬೆಂಗಳೂರು ಕುಟುಂಬ ರೆಡೀ ನಾ? ಎಂದು ಚಾಹಲ್ ಮಾಡಿರುವ ಟ್ವೀಟ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. 1.3ಮಿಲಿಯನ್ ಫಾಲೋವರ್ಸ್ ಅನ್ನು ಚಾಹಲ್ ಹೊಂದಿದ್ದಾರೆ.

ಕನ್ನಡದಲ್ಲಿ tweet ಮಾಡಿದ್ದಕ್ಕೆ ನಿಮಗೆ ಕೋಟಿ ನಮನ
"ನಾವ್ ಯಾವಾಗ್ಲೂ ರೆಡಿ, ಕನ್ನಡದಲ್ಲಿ tweet ಮಾಡಿದ್ದಕ್ಕೆ ನಿಮಗೆ ಕೋಟಿ ನಮನ", "ಇದು ಬೇಕಾಗಿರೋದು, ನಾವ್ ರೆಡಿ, ನೀವು", ಬಾ..ಬಾ..ನಾ ರೆಡಿ", "ಈ ಸಲ್ ಕಪ್ ನಮ್ದೆ" ಎನ್ನುವ ಪ್ರತಿಕ್ರಿಯೆಗಳು ಚಾಹಲ್ ಟ್ವೀಟಿಗೆ ಬಂದಿವೆ. ಚಾಹಲ್ ಮಾಡಿರುವ ಟ್ವೀಟ್ 2.9 ಸಾವಿರ ಬಾರಿ ರಿಟ್ವೀಟ್ ಆಗಿದ್ದು, 44 ಸಾವಿರ ಲೈಕ್ಸ್ ಅನ್ನು ಪಡೆದುಕೊಂಡಿದೆ.

ಐಪಿಎಲ್ ನಲ್ಲಿ ಚಾಹಲ್ ಅವರ ಇದುವರೆಗಿನ ಉತ್ತಮ ಸಾಧನೆ
ಚಾಹಲ್ ಇದುವರೆಗೆ 2013-2019ರ ಅವಧಿಯಲ್ಲಿ 84 ಪಂದ್ಯಗಳನ್ನು ಆಡಿದ್ದು, 2,318 ರನ್ ನೀಡಿ, 100 ವಿಕೆಟ್ ಪಡೆದುಕೊಂಡಿದ್ದಾರೆ. 25 ರನ್ನಿಗೆ ನಾಲ್ಕು ವಿಕೆಟ್ ಪಡೆದಿರುವುದು ಐಪಿಎಲ್ ನಲ್ಲಿ ಚಾಹಲ್ ಅವರ ಇದುವರೆಗಿನ ಉತ್ತಮ ಸಾಧನೆ. ಕಳೆದ ಐಪಿಎಲ್ ನಲ್ಲಿ ಚಾಹಲ್ ಹದಿನೆಂಟು ವಿಕೆಟ್ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications