ಕೆXIಪಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಕ್ರಿಸ್ ಮೋರಿಸ್ ಆಡುತ್ತಿಲ್ಲ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಕ್ರಿಸ್ ಮೋರಿಸ್ ಅವರು ಮುಂಬರಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ. ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸನ್ ಈ ವಿಚಾರವನ್ನು ಖಾತರಿಪಡಿಸಿದ್ದಾರೆ.
ಗಾಯಕ್ಕೀಡಾಗಿರುವುದರಿಂದ ಮೋರಿಸ್‌ಗೆ ಮುಂದಿನ ಪಂದ್ಯದಲ್ಲಿ ಆಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಐಪಿಎಲ್ 3ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯ ಮೊದಲ ಪಂದ್ಯ ಆಡಿದ್ದವು. ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಆಟಗಾರ ಮೋರಿಸ್ ಆ ಪಂದ್ಯದಲ್ಲೂ ಆಡಿರಲಿಲ್ಲ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೋರಿಸ್ ಮೈದಾನಕ್ಕಿಳಿಯದಿದ್ದಾಗ ಆರ್‌ಸಿಬಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಮೈಕ್ ಹೆಸನ್ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೆಸನ್ ಅವರು ಕ್ರಿಸ್ ಅಲಭ್ಯತೆ ಬಗ್ಗೆ ಮಾತನಾಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ನಡೆದ ಆಟಗಾರರ ಹರಾಜಿನ ವೇಳೆ ಕ್ರಿಸ್ ಮೋರಿಸ್ ಅವರನ್ನು 10 ಕೋ.ರೂ.ಗೆ ಆರ್‌ಸಿಬಿ ಖರೀದಿಸಿತ್ತು. ಮೋರಿಸ್ ಅನುಪಸ್ಥಿತಿಯಲ್ಲೂ ಆರ್‌ಸಿಬಿಯಲ್ಲಿ ಡೇಲ್ ಸ್ಟೇನ್, ಶಿವಂ ದೂಬೆ, ಯುಜುವೇಂದ್ರ ಚಾಹಲ್, ಜೋಶ್ ಫಿಲಿಪ್ಪೆ ಇಂಥ ಅನೇಕ ಆಟಗಾರರಿದ್ದಾರೆ. ಸೆಪ್ಟೆಂಬರ್ 24ಕ್ಕೆ ಐಪಿಎಲ್ 6ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆXIಪಿ ಆಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications