ಐಪಿಎಲ್ 2020: ಹೈದರಾಬಾದ್‌ಗೆ ಸುಲಭ ಗುರಿ ನೀಡಿದ ವಿರಾಟ್ ಕೊಹ್ಲಿ ಪಡೆ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ 120 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿತ್ತು. ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಪಡೆ ಆರಂಭದಿಂದಲೇ ಕುಸಿತ ಕಾಣಲು ಆರಂಭಿಸಿತ್ತು. ಯುವ ಆಟಗಾರ ಪಡಿಕ್ಕಲ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ವಿರಾಟಗ ಕೊಹ್ಲಿ ಕೂಡ 7 ರನ್‌ಗೆ ಔಟಾದರು. ಈ ಕುಸಿತದಿಂದ ಮೇಲೆತ್ತಲು ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಎಬಿಡಿ ವಿಲಿಯರ್ಸ್ 24 ರನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು.
ಆರಂಭಿಕನಾಗಿ ಕಣಕ್ಕಿಳಿದ ಜೋಶ್ ಫಿಲಿಪ್ಪೆ ಇಮದಿನ ಪಂದ್ಯದಲ್ಲಾದರೂ ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು. 32 ರನ್‌ಗಳಿಸಿ ಫಿಲಿಪ್ಪೆ ವಿಕೆಟ್ ಒಪ್ಪಿಸಿದರೆ ಬಳಿಕ ವಾಶಿಂಗ್ಟನ್ ಸುಂದರ್ 21 ರನ್‌ಗಳ ಕಾಣಿಸಿ ನೀಡಿ ಹೊರನಡೆದರು. ಗುರ್‌ಕೀರತ್ 15 ರನ್ ಗಳಿಸಿ ಔಟಾಗದೆ ಉಳಿದಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಅದ್ಭುತವಾಗಿತ್ತು. ಜೇಸನ್ ಹೋಲ್ಡರ್ ಹಾಗು ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದಾರೆ. ಟಿ ನಟರಾಜನ್ ನಾಲ್ಕು ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ರಶೀದ್ ಖಾನ್ ಹಾಗೂ ನದೀಮ್ ಕೂಡ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications