ಐಪಿಎಲ್ 2020: ಮುಂಬೈಗೆ 165 ರನ್‌ಗಳ ಗುರಿ ನೀಡಿದ ಆರ್‌ಸಿಬಿ

ಐಪಿಎಲ್ ಅಂಗಳದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಟಕ್ಕೆ ಇಳಿದಿದೆ. ಟಾಸ್ ಗೆದ್ದು ಎದುರಾಳಿಯನ್ನು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಿದ ಮುಂಬೈ ಎದುರಾಳಿ ಆರ್‌ಸಿಬಿಯನ್ನು 164 ರನ್‌ಗಳಿಗೆ ಕಟ್ಟಿಹಾಕಲು ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿಗೆ ಯುವ ಆರಂಭಿಕ ಆಟಗಾರರು ಉತ್ತಮ ಆರಂಭವನ್ನು ನೀಡಿದರು. ದೇವದತ್ ಪಡಿಕ್ಕಲ್‌ಗೆ ಸಾಥ್ ನೀಡಿದ ಜೋಶ್ ಫಿಲಿಪ್ಪೆ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನು ನೀಡಿದರು.
ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. 45 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 74 ರನ್‌ಗಳನ್ನು ಬಾರಿಸಿದರು. 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಮಿಂಚಿದರು. ಆದರೆ ಆರ್‌ಸಿಬಿಯ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ದೊರೆಯಲಿಲ್ಲ.
ನಾಯಕ ವಿರಾಟ್ ಕೊಹ್ಲಿ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ ಎಬಿ ಡಿವಿಲಿಯರ್ಸ್ ಕೂಡ 15 ರನ್‌ಗಳಿಗೆ ಆಟ ಮುಗಿಸಿದರು. ಶಿವಂ ದುಬೆ ಹಾಗೂ ಕ್ರಿಸ್ ಮೋರಿಸ್ ಬ್ಯಾಟ್‌ನಿಂದಲೂ ರನ್ ಹರಿದು ಬರಲಿಲ್ಲ. ಅಂತಿಮವಾಗಿ ಗುರ್‌ಕೀರತ್ ಸಿಂಗ್ ಮನ್ ಹಾಗೂ ವಾಶಿಂಗ್ಟನ್ ಸುಂದರ್ ಕ್ರಮವಾಗಿ 14 ಹಾಗೂ 10 ರನ್‌ಗಳ ಕೊಡುಗೆಯನ್ನು ನೀಡಿದರು.
ಮುಂಬೈ ಇಂಡಿಯನ್ಸ್ ಪರವಾಗಿ ಜಸ್ಪ್ರೀತ್ ಬೂಮ್ರಾ ಅದ್ಭುರ ದಾಳಿ ಸಂಘಟಿಸಿದರು. ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಬೂಮ್ರಾ ಕೇವಲ 14 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಬೋಲ್ಟ್, ಪೊಲಾರ್ಡ್ ಹಾಗೂ ಚಾಹರ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications