
ಐಪಿಎಲ್‌ಗೆ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಆಯಾಯ ಫ್ರಾಂಚೈಸಿ ತಂಡಗಳ ಬಹುತೇಕ ಆಟಗಾರರು ತಮ್ಮ ತಮ್ಮ ತಂಡಗಳನ್ನು ಸೇರಿಕೊಂಡಿದ್ದಾರೆ. ಆರ್‌ಸಿಬಿ ಆಟಗಾರರು ಬೆಂಗಳೂರಿನ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದು ನಿಯಮಗಳನ್ನು ಪೂರೈಸುತ್ತಿದ್ದಾರೆ.
13ನೇ ಆವೃತ್ತಯ ಐಪಿಎಲ್‌ಗೆ ಇನ್ನು ಒಂದು ತಿಂಗಳಷ್ಟೇ ಬಾಕಿಯಿದೆ. ಹಾಗಾಗಿ ಎಲ್ಲಾ ಆಟಗಾರರು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ವಾರಂಟೈನ್‌ನಲ್ಲಿರುವ ಆರ್‌ಸಿಬಿ ತಂಡದ ಆಟಗಾರರು ಹೋಟೆಲ್‌ನಲ್ಲಿದ್ದುಕೊಂಡೇ ಅಭ್ಯಾಸದಲ್ಲಿ ತೊಡಗಿರುವ ವೀಡಿಯೋವನ್ನು ಆರ್‌ಸಿಬಿ ತಂಡದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
No ground. No problem.
— Royal Challengers Bangalore (@RCBTweets) August 18, 2020
Practice sessions: Quarantine Edition.
Preparations for the IPL have begun in full swing! 😉 #PlayBold #BoldDiaries #IPL2020 pic.twitter.com/lSR2v1bRWU
ಈ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡೇ ಆಟಗಾರರು ಬ್ಯಾಟಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಎಲ್ಲಾ ಆಟಗಾರರು ಸಾಮಾಜಿಕ ಅಂತರ ಹಾಗೂ ಎಲ್ಲಾ ಕೊರೊನಾ ವೈರಸ್ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡು ಅಭ್ಯಾಸವನ್ನು ನಡೆಸುತ್ತಿದ್ದಾರೆ. ಕ್ವಾರಂಟೈನ್ ಮುಗಿದ ಬಳಿಕ ಅಂಗಳಕ್ಕಿಳಿದು ತಮ್ಮ ಅಭ್ಯಾಸವನ್ನು ಆರಂಭಿಸಲಿದ್ದಾರೆ.
ಇದಕ್ಕೂ ಮುನ್ನ ಆರ್‌ಸಿಬಿ ಚಾಹಲ್ ವೀಡಿಯೊವನ್ನು ಹಂಚಿಕೊಂಡಿತ್ತು. ಚಾಹಲ್ ಎಸ್‌ಒಪಿ ನಿಯಮಗಳನ್ನು ಅನುಸರಿಸುತ್ತಿರುವ ವಿಡಿಯೋ ಅದಾಗಿತ್ತು. ಆರ್‌ಸಿಬಿಯ ತಂಡವು ಆಗಸ್ಟ್‌ನ ಕೊನೆಯ ವಾರದಲ್ಲಿ ಯುಎಇಗೆ ತೆರಳಲಿದೆ, ಅದಕ್ಕೂ ಮೊದಲು ಎಲ್ಲಾ ಆಟಗಾರರು ಏಳು ದಿನಗಳ ಸಂಪರ್ಕ ತಡೆಯನ್ನು ಅನುಸರಿಸಬೇಕಾಗುತ್ತದೆ. ಹಾಗೂ ಹಲವು ಕೊರೊನಾ ವೈರಸ್ ಪರೀಕ್ಷೆಗೂ ಒಳಪಡಬೇಕಾಗುತ್ತದೆ.